janadhvani

Kannada Online News Paper

ಉಮ್ರಾ ನಿರ್ವಹಿಸಲು ಒಂದಕ್ಕಿಂತ ಹೆಚ್ಚು ಬಾರಿ ಆಗಮಿಸದರೆ ಶುಲ್ಕ-ಪುನಃ ಪರಿಶೀಲಿಸಲು ಆಗ್ರಹ

ರಿಯಾದ್: ಪ್ರತೀ ವರ್ಷ ಒಂದಕ್ಕಿಂತ ಹೆಚ್ಚು ಬಾರಿ ಉಮ್ರ ನಿರ್ವಹಿಸಲು ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ವಿದೇಶಿಗಳಿಗೆ ವಿಧಿಸಲಾದ ಶುಲ್ಕವನ್ನು ಪುನಃ ಪರಿಶೀಲಿಸುವಂತೆ ಒತ್ತಾಯಿಸಿದ ಮಕ್ಕಾ ಛೇಂಬರ್ ಆಫ್ ಕಾಮರ್ಸ್, ಉಮ್ರಾ ಸರ್ವೀಸ್ ಸಂಸ್ಥೆಗಳಲ್ಲಿ ಸ್ಥಳೀಯ ಕಾರ್ಮಿಕರ ಸಂಖ್ಯೆಯನ್ನು 5 ಕ್ಕೆ ಇಳಿಸುವಂತೆಯೂ ಆಗ್ರಹಿಸಿದೆ.

ಛೇಂಬರ್ ಆಫ್ ಕಾಮರ್ಸ್ ಅಡಿಯಲ್ಲಿನ ಯಾತ್ರಿಗಳ ಸಮಿತಿಯು ಹಜ್ ಮತ್ತು ಉಂರಾ ಪ್ರತಿನಿಧಿಗಳಿಗಾಗಿ ಆಯೋಜಿಸಿದ ಕಾರ್ಯಾಗಾರದಲ್ಲಿ ವಿವಿಧ ಬೇಡಿಕೆಗಳು ಕೇಳಿಬಂದಿದೆ.ವರ್ಷದಲ್ಲಿ ಎರಡನೇ ಬಾರಿ ಉಮ್ರಾ ನಿರ್ವಹಿಸಲು ಬರುವವರಿಗೆ ವಿಧಿಸಲಾದ 2,000 ರಿಯಾಲ್ ಶುಲ್ಕವನ್ನು ರದ್ದು ಪಡಿಸಬೇಕೆಂದು ಕಾರ್ಯಾಗಾರ ಒತ್ತಾಯಿಸಿದೆ.

ಉಂರಾ ಸೇವಾ ಕಂಪೆನಿಗಳ ಬ್ಯಾಂಕ್ ಖಾತರಿ ಎರಡುವರೆ ಲಕ್ಷವಾಗಿ ಏಕೀಕರಿಸಲ್ಪಡಬೇಕು.ಮಕ್ಕಾ ಮತ್ತು ಮದೀನಾದಲ್ಲಿ ಸೇವಾ ಸಂಸ್ಥೆಗಳಿಗೆ ಕಚೇರಿಗಳಿರಬೇಕು ಎಂಬ ನಿಬಂಧನೆಯನ್ನು ಬದಲಾಯಿಸಿ ಒಂದು ಸ್ಥಳದಲ್ಲಿ ಕಚೇರಿ ಹೊಂದುವಂತೆ ಕಾನೂನು ತಿದ್ದುಪಡಿ ಮಾಡಬೇಕು.

ಸೇವಾ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹಜ್ ಮತ್ತು ಉಮ್ರಾ ಸಚಿವಾಲಯದ ಪ್ರತಿನಿಧಿಯನ್ನು ಒಳಗೊಂಡಿರುವ ಒಂದು ಸಮಿತಿಯನ್ನು ರಚಿಸಬೇಕು. ಉಂರಾ ಸೇವೆಗಳಿಲ್ಲದ ದೇಶಗಳಿಂದ ಯಾತ್ರಿಕರಿಗೆ ವಿದೇಶಾಂಗ ಕಾರ್ಯಾಲಯ ಮೂಲಕ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಬೇಡಿಕೆ ಕೂಡ ಕಾರ್ಯಾಗಾರದಲ್ಲಿ ಕೇಳಿ ಬಂತು.

error: Content is protected !! Not allowed copy content from janadhvani.com