14 ವಿಧದ 10 ರೂ. ನಾಣ್ಯ ಚಲಾವಣೆಗೆ ಯೋಗ್ಯ: ಆರ್‌ಬಿಐ ಸ್ಪಷ್ಟನೆ

ನವದೆಹಲಿ: 14 ವಿಧದ 10ರೂ. ಮುಖಬೆಲೆಯ ನಾಣ್ಯಗಳು ಚಲಾವಣೆಗೆ ಅರ್ಹವಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತೊಮ್ಮ ಸ್ಪಷ್ಟ‍ಪಡಿಸಿದೆ. ಕೆಲ ವರ್ತಕರು 10ರ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವರದಿಯಾಗಿರುವುದರಿಂದ ಆರ್‌ಬಿಐ ಈ ಪ್ರಕಟಣೆ ಹೊರಡಿಸಿದೆ.

10 ಮುಖಬೆಲೆಯ ನಾಣ್ಯದ ಬಗ್ಗೆ ಯಾರೊಬ್ಬರೂ ಹಾಗೆ ಅನುಮಾನ ಪಡಬೇಕಾಗಿಲ್ಲ. 10 ಮುಖಬೆಲೆಯ ಎಲ್ಲ ನಾಣ್ಯಗಳು ಬಳಕೆಗೆ ಯೋಗ್ಯವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸರ್ಕಾರಿ ಸ್ವಾಮ್ಯದ ಟಂಕಸಾಲೆಗಳಲ್ಲಿಯೇ ಈ ನಾಣ್ಯಗಳನ್ನು ಟಂಕಿಸಲಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿನಿಧಿಸುವ, ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿರುವ ಈ ನಾಣ್ಯಗಳನ್ನು ಆಯಾ ಕಾಲಕ್ಕೆ ಹೊರತರಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಅಲ್ಲದೆ, ಈ ನಾಣ್ಯಗಳನ್ನು ಸ್ವೀಕರಿಸಲು ಮತ್ತು ವಿನಿಮಯ ಮಾಡಿಕೊಡಲು ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ. 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ ಎಂದು ಈ ಹಿಂದೆಯೂ ಆರ್‌ಬಿಐ ಸ್ಪಷ್ಟಪಡಿಸಿತ್ತು. ಆದರೂ ಆ ಕುರಿತ ಗೊಂದಲ ಮುಂದುವರಿದಿದೆ. ಹೀಗಾಗಿ ಆರ್‌ಬಿಐ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!