UAE: ಕೆಲಸ ಬದಲಾಯಿಸಲು ಸ್ವಭಾವ ಸರ್ಟಿಫಿಕೇಟ್ ಕಡ್ಡಾಯ

ದುಬೈ: ಯುಎಇಯಲ್ಲಿ ಇನ್ನು ಮುಂದೆ ಕೆಲಸ ಬದಲಾಯಿಸಲು ಸ್ವಭಾವ ಸರ್ಟಿಫಿಕೇಟ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಫೆಬ್ರವರಿ ಯಿಂದ ಕಾನೂನು ಜಾರಿಯಾಗಲಿದೆ. ಸರ್ಟಿಫಿಕೇಟ್ ಗಾಗಿ ದುಬೈ, ಅಬುಧಾಬಿಯ ಪೊಲೀಸ್ ಠಾಣೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಹೆಸರು ಮತ್ತು ಎಮಿರೇಟ್ಸ್‌ ಐಡಿಯ ಸಂಖ್ಯೆಯನ್ನು ನಮೂದಿಸಿ ಆನ್ ಲೈನ್ ಮೂಲಕ ಅಥವಾ ಸ್ಮಾರ್ಟ್ ಅಪ್ಲಿಕೇಶನ್ ಮೂಲಕವೂ ಅರ್ಜಿ ಸಲ್ಲಿಸಬಹುದು.ಐಡಿ ಯ ಕಾಲಾವಧಿ ಮುಗಿದಿದ್ದಲ್ಲಿ ಅದರ ವಿವರವನ್ನು ನೀಡಿದರೂ ಸಾಕಾಗುವುದು.

ಅನಿವಾಸಿಗಳು 220 ದಿರ್‌ಹಂ ಮತ್ತು ತದ್ದೇಶೀಯರು 120 ದಿರ್‌ಹಂ ಪಾವತಿಸಿದರೆ ಸರ್ಟಿಫಿಕೇಟ್ ದೊರೆಯಲಿದೆ. ದೇಶದಿಂದ ಹೊರಗಿರುವವರು 320 ದಿರ್‌ಹಂ ಪಾವತಿಸಬೇಕು. ಎರಡು ಅಥವಾ ಏಳು ದಿವಸಗಳಲ್ಲಿ ಸರ್ಟಿಫಿಕೇಟ್ ಲಭಿಸಲಿದೆ. ಹಲವು ವರ್ಷಗಳಿಂದ ಯುಎಇ ಯಲ್ಲಿ ವಾಸವಿರುವವರು ಹೊಸ ವಿಸಾಗೆ ಅರ್ಜಿ ಸಲ್ಲಿಸುವಾಗ ಸದ್ರಿ ಸರ್ಟಿಫಿಕೇಟ್ ನೀಡಬೇಕು. ವಿದೇಶದಲ್ಲಿ ಇರುವವರು ಸಮೀಪದ ಪೊಲೀಸ್ ಠಾಣೆ ಯಲ್ಲಿ ಬೆರಳಚ್ಚು ದಾಖಲಿಸಿ ಹತ್ತಿರದ ಯುಎಇ ದೂತಾವಾಸ ಕೇಂದ್ರಗಳಿಗೆ ನೀಡಬೇಕೇಂಬ ನಿಯಮವಿದೆ.ಮಾಹಿತಿಗಾಗಿ 901 ಸಂಖ್ಯೆಗೆ ಕಾಲ್ ಮಾಡಬಹುದು ಅಥವಾ mail@dubaipolice.gov.ae ಎನ್ನುವ ಮೇಲ್ ಮೂಲಕ ಸಂಪರ್ಕಿಸಬಹುದು.

ಫೆಬ್ರವರಿ ಯಿಂದ ಸ್ವಭಾವ ಸರ್ಟಿಫಿಕೇಟ್ ಇಲ್ಲದವರಿಗೆ ಕಾರ್ಮಿಕ ವಿಸಾ ಲಭಿಸದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ವಿಸಾಗೆ ಅರ್ಜಿ ಸಲ್ಲಿಸುವವರು ತಮ್ಮ ದೇಶದ ಸರ್ಟಿಫಿಕೇಟ್ ನ್ನು ಅರ್ಜಿಯೊಂದಿಗೆ ಸಮರ್ಪಿಸಬೇಕು. ಇನ್ನೊಂದು ದೇಶದಲ್ಲಿ ಐದು ವರ್ಷಗಳಿಂದ ಉಳಿದು ಕೊಂಡವರು ಆ ದೇಶದಿಂದ ಸರ್ಟಿಫಿಕೇಟ್‌ನ್ನು ಹಾಜರು ಪಡಿಸಬೇಕು. ಆಯಾಯ ದೇಶಗಳಲ್ಲಿನ ಯುಎಇ ದೂತಾವಾಸ ಕೇಂದ್ರಗಳು ಅದನ್ನು ದೃಢೀಕರಣ ಮಾಡಬೇಕು. ಕಾರ್ಮಿಕ ವಿಸಾ ಲಭಿಸಬೇಕಾದರೆ ಮಾತ್ರ ಈ ಸರ್ಟಿಫಿಕೇಟ್ ಅಗತ್ಯ ಎಂದು ತಿಳಿಸಲಾಗಿದೆ.ಆಶ್ರಿತರು, ಸಂದರ್ಶಕರು, ಚಿಕಿತ್ಸೆಗಾಗಿ ಬಂದವವರಿಗೆ ಈ ಕಾನೂನಿಂದ ವಿನಾಯಿತಿ ನೀಡಲಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!