ಸೌದಿ: ಡ್ರೈವಿಂಗ್ ನಲ್ಲಿ ಕಸರತ್ತು ಮಾಡುವಿರಾ? ವಿನೂತನ ಶಿಕ್ಷೆ ನಿಮಗೆ ಕಾದಿದೆ ಎಚ್ಚರ!

ಜಿದ್ದಾ: ರಸ್ತೆಗಳಲ್ಲಿ ಸಾಹಸಿಕ ಡ್ರೈವಿಂಗ್ ನಡೆಸುವವರಿಗೆ ವಿನೂತನ ಶಿಕ್ಷಾ ವಿಧಾನವನ್ನು ಸೌದಿ ಟ್ರಾಫಿಕ್ ವಿಭಾಗ ಪರಿಚಯಿಸಲಿದೆ.
ಸಾಹಸಿಕ ಡ್ರೈವಿಂಗ್, ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವವರು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಸೇವೆ ಮಾಡುವಂತಹ ಶಿಕ್ಷೆಗೆ ಗುರಿಯಾಗಲಿದ್ದಾರೆ.ಇದೀಗ ಪೂರ್ವ ವಲಯದಲ್ಲಿ ಈ ಶಿಕ್ಷೆಯನ್ನು ಜಾರಿಗೆ ತರಲು ಪ್ರಾರಂಭಿಸಲಾಗಿದೆ.

ಟ್ರಾಫಿಕ್ ಅಪಘಾತ ಗಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಕಡ್ಡಾಯವಾಗಿ ಸೇವೆ ಮಾಡಬೇಕು. ರೋಗಿಗಳಿಗೆ ಆಹಾರ ನೀಡುವುದು, ಅವರನ್ನು ಶುಚಿಗೊಳಿಸುವುದು, ಅವರೊಂದಿಗೆ ಅನುಗಮಿಸುವುದು ಎಲ್ಲವನ್ನೂ ಈ ಮೂರು ಗಂಟೆಗಳಲ್ಲಿ ಮಾಡಬೇಕು. ಇದಕ್ಕಾಗಿ ಪ್ರಥಮ ಬಾರಿಗೆ ತರಬೇತಿ ನೀಡಲಾಗುವುದು. ದಿನಾ ಇಬ್ಬರು ರೋಗಿಗಳಿಗೆ ಸೇವೆ ನೀಡಿ ಅದರ ವರದಿಯನ್ನು ಸಲ್ಲಿಸಬೇಕು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!