ಸಮಾಜದ ಶಾಂತಿಗೆ ಮಾರಕವಾದ ಕೋಮುವಾದಿ ಗೂಂಡಾಗಳನ್ನು ಗಡೀಪಾರು ಮಾಡಿ – ಮುಖ್ಯಮಂತ್ರಿ

ಸಮಾಜದ ಶಾಂತಿ ಕದಡುವ ಮತೀಯ ವಾದಿಗಳ ಮೇಲೆ ಗೂಂಡಾ ಖಾಯ್ದೆ ಬಳಸಿ ಗಡಿಪಾರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಯ್ಯ ಸೂಚನೆ ನೀಡಿದ್ದಾರೆ. ನಗರದ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಪೊಲೀಸ್ ಹಿರಿಯ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ ಮಂಗಳೂರು ದೀಪಕ್‍ರಾವ್ ಮತ್ತು ಬಶೀರ್ ಅವರ ಕೊಲೆ ಪ್ರಕರಣ ತಡೆಯಬಹುದಿತ್ತು ಎಂದರು.

image

ರಾಜ್ಯದಲ್ಲಿ ಮೂಲಭೂತ ವಾದಿಗಳು ಸಮಾಜದ ಯಾವುದೇ ಕೋಮಿನವರಾದರೂ ಶಾಂತಿ ಕದಡಬಾರದು ಅಂತಹ ಸಂಘಟನೆಗಳು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಇನ್ನು ಮುಂದೆ ಕೋಮು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಘಟನೆ ನಡೆದರೆ ಅಂತಹ ಜಿಲ್ಲಗಳ ಡಿಸಿಪಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಹೊಣೆ ಮಾಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಸುರಕ್ಷತೆ ಭಾವನೆ ಮೂಡಿಸಲು ಪೊಲೀಸರು ಸಮರ್ಪಕ ಕೆಲಸ ಮಾಡಬೇಕು. ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!