ಅಂತರ್ ರಾಜ್ಯ ಸರಕು ಸಾಗಾಣಿಕೆಗೆ ಇನ್ನು ಈ-ವೇ ಬಿಲ್ ಜಾರಿಗೆ

ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದದಿಂದ ರಾಜ್ಯಕ್ಕೆ ಸಾಗಿಸುವುದರ ಮೇಲೆ ನಿಗಾ ಇರಿಸುವ ಇ-ವೇ ಬಿಲ್ ಫೆಬ್ರವರಿ 1 ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ ಎಂದು ಬಿಹಾರದ ಉಪಮುಖ್ಯಮಂತ್ರಿಗಳು ಹಾಗೂ ಜಿಎಸ್‍ಟಿ ಮಂಡಳಿ ಅಧ್ಯಕ್ಷರಾದ ಸುಶೀಲ್‍ಕುಮಾರ್ ಮೋದಿ ತಿಳಿಸಿದರು.
ಅವರು ಇಂದು ಖಾಸಗಿ ಹೋಟೆಲ್‍ನಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.  ಎನ್‍ಐಸಿಯವರು ಇ-ವೇ ಬಿಲ್‍ನ ತಂತ್ರಾಂಶವನ್ನು ಸಿದ್ದಪಡಿಸಿದ್ದು, ಇದನ್ನು ಜನವರಿ 15 ರಿಂದಲೇ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.  ಅಂತರರಾಜ್ಯ ಸರಕು ಸಾಗಣಿಕೆಗೆ ಇ-ವೇ ಬಿಲ್ ಕಡ್ಡಾಯವಾಗಿದೆ.  ಕರ್ನಾಟಕವನ್ನು ಮಾದರಿಯನ್ನಾಗಿ ಇಟ್ಟುಕೊಂಡು ಇತರೆ ಎಲ್ಲಾ ರಾಜ್ಯಗಳಲ್ಲೂ ಇ-ವೇ ಬಿಲ್‍ನನ್ನು ಜಾರಿಗೊಳಿಸಲಾಗುವುದು ಎಂದರು. ಇ-ವೇ ಬಿಲ್ ಉಸ್ತುವಾರಿಗೆ ಹೆಲ್ಪ್ ಡೆಸ್ಕ್ ಸಹ ಸ್ಥಾಪಿಸಲಾಗಿದ್ದು, ಇದರ ಎಲ್ಲಾ ಸಾಧಕ ಬಾಧಕವನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!