ಪ್ರತೀ ಮೂರು ದಿನಕ್ಕೊಬ್ಬ ಯೋಧನನ್ನು ಕಳಕೊಳ್ಳುತ್ತಿರುವ ಭಾರತೀಯ ಸೇನೆ…!!!

ಹನ್ನೊಂದು ಲಕ್ಷ ಸೈನಿಕರ ಸದೃಢ ಪಡೆಯಾದ ಭಾರತೀಯ ಸೇನೆ ಕಳೆದ 13 ವರ್ಷಗಳಲ್ಲಿ ಪ್ರತಿ ಮೂರು ದಿನಕ್ಕೊಬ್ಬ ಯೋಧನನ್ನು ಕಳೆದುಕೊಳ್ಳುತ್ತಿದೆ..! 2005ರ ಜನವರಿಯಿಂದ 2017ರ ಡಿಸೆಂಬರ್ ಅವಧಿ ನಡೆದು ಲಭಿಸಿರುವ ಭಾರತೀಯ ಸೇನೆಯ ಅಂಕಿ-ಅಂಶ ಮಾಹಿತಿಯಿಂದ ಈ ಆತಂಕಕಾರಿ ಸಂಗತಿ ತಿಳಿದುಬಂದಿದೆ.  ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಭಯೋತ್ಪಾದನೆ ನಿಗ್ರಹ ಹೋರಾಟ, ಬಂಡುಕೋರರ ವಿರುದ್ಧ ಕಾರ್ಯಾಚರಣೆಗಳು, ಶಾಂತಿ ಪಾಲನಾ ಕಾರ್ಯಗಳು ಇತ್ಯಾದಿಯಿಂದ ಈ ಅವಧಿಯಲ್ಲಿ ಒಟ್ಟು 1,684 ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತೀಯ ಸೇನಾ ಪಡೆಯ 70ನೇ ದಿನಾಚರಣೆ ಸಂದರ್ಭದಲ್ಲಿ  ಬಿಡುಗಡೆ ಮಾಡಲಾದ ಅಂಕಿಅಂಶ ಮಾಹಿತಿಯಲ್ಲಿ, ಕಳೆದ ವರ್ಷ ಭಾರತೀಯ ಸೇನೆಯ ವಿವಿಧ ವಿಭಾಗಗಳ ಏಳು ಅಧಿಕಾರಿಗಳೂ ಸೇರಿದಂತೆ 91ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. 2016ರಲ್ಲಿ 86 ಯೋಧರು, 2015ರಲ್ಲಿ 85, 2014ರಲ್ಲಿ 65, 2013ರಲ್ಲಿ 64, 2012ರಲ್ಲಿ 75, 2011ರಲ್ಲಿ 71, 2009ರಲ್ಲಿ 107, 2008ರಲ್ಲಿ 71 ಹಾಗೂ 2007ರಲ್ಲಿ 221 ಹಾಗೂ 2006ರಲ್ಲಿ 223 ಸೈನಿಕರು ಸೇವೆಯಲ್ಲಿಯೇ ಜೀವತ್ಯಾಗ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!