janadhvani

Kannada Online News Paper

ನಿರೂಪಕನ ನಿಂದನಾತ್ಮಕ ಹೇಳಿಕೆ-ಕೆಸಿಎಫ್ ಬಹರೈನ್ ಖಂಡನೆ

ಮನಾಮ: ಕನ್ನಡ ದೃಶ್ಯ ಮಾಧ್ಯಮ ದ ಪತಿಷ್ಠಿತ ವಾರ್ತಾವಾಹಿನಿಯಾದ ಸುವರ್ಣ ನ್ಯೂಸ್24/7ನ ನಿರೂಪಕ ಅಜಿತ್ ಹನುಮಕ್ಕನವರ್ ರವರು ಚರ್ಚಾಕಾರ್ಯಕ್ರಮವೊಂದರಲ್ಲಿ ರಾಮನ ಕುರಿತ ಪುಸ್ತಕ ಬರೆದಿರುವ ಪ್ರೊ. ಕೆ.ಎಸ್ ಭಗವಾನ್ ರವರನ್ನು ವಿಮರ್ಶಿಸುವ ಭರದಲ್ಲಿ ಪ್ರವಾದಿ (ಸ.ಅ) ಕುರಿತ ಅಸಂಬದ್ಧ ಹೇಳಿಕೆಯನ್ನು ಕೆಸಿಎಫ್ ಬಹರೈನ್ ತೀವ್ರವಾಗಿ ಖಂಡಿಸಿದೆ.

ಪ್ರವಾದಿ ಮುಹಮ್ಮದ್ (ಸ.ಅ) ರ ಜೀವನ ಶೈಲಿಯು ಇಡೀ ವಿಶ್ವಕ್ಕೇ ಮಾದರಿಯಾಗಿರುವುದಲ್ಲದೇ ಸರ್ವಜನಾಂಗವು ಗೌರವಿಸುತ್ತಿವೆ.ಜಗಮೆಚ್ಚಿದ ಲೋಕ ನಾಯಕ ಪ್ರವಾದಿ (ಸ ಅ)ರವರ ಮಾದರಿ ಜೀವನ ಚರಿತ್ರೆಯ ಕುರಿತು ಖುರ್ಆನ್ ಜೊತೆಗೆ ಎಷ್ಟೋ ವಿಶ್ವ ವಿಖ್ಯಾತ ವಿದ್ವಾಂಸರು ,ಲೇಖಕರು ವಿವಿಧ ಭಾಷೆಗಳಲ್ಲಿ ಬರೆದಿರುವ ಪುಸ್ತಕಗಳನ್ನು ಓದಿಕೊಂಡು ಜಗತ್ತಿನೆಲ್ಲೆಡೆ ಇಸ್ಲಾಂ ಧರ್ಮಕ್ಕೆ ಸೇರುತ್ತಿರುವುದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಕಾಣಬಹುದು.

ಆದರೆ ಪ್ರೊ.ಭಗವಾನ್ ರವರು ಬರೆದ ವಿವಾದಾತ್ಮಕ ಕೃತಿಯ ಬಗ್ಗೆ ಚರ್ಚಿಸುವ ಸಂಧರ್ಭದಲ್ಲಿ ಮಾಧ್ಯಮ ವೃತ್ತಿ ಮತ್ತು ವ್ಯಾಪ್ತಿಯ ಪರಿವೇ ಇಲ್ಲದೆ ಪತ್ರಿಕಾಧರ್ಮವನ್ನೇ ಮರೆತು ಇಡೀ ಮುಸ್ಲಿಂ ಜನಾಂಗವನ್ನೇ ಕೆಣಕಿಸುವಂತೆ ಮಾಡುವ ಅನಗತ್ಯವಾದ ನಿಂದನಾತ್ಮಕ ಹೇಳಿಕೆಯನ್ನು ನೀಡುತ್ತಿರುವ ಮಾಧ್ಯಮಗಳನ್ನು ನಿರೂಪಕರನ್ನು ಬಹಿಷ್ಕರಿಸಿ ಅಂತಹವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಸಿಎಫ್ ಬಹರೈನ್ ಆಗ್ರಹಿಸುತ್ತಿದೆ.

error: Content is protected !! Not allowed copy content from janadhvani.com