ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಸಂಚು: ಮಾಧ್ಯಮದ ಮುಂದೆ ಕಣ್ಣೀರಿಟ್ಟ ತೊಗಾಡಿಯಾ

ಜೈಪುರ : ಹಳೆಯ ಕೇಸೊಂದರಲ್ಲಿ ನನ್ನ ಬೆನ್ನಿಗೆ ಬಿದ್ದಿದ್ದ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಹೊಂದಿದ್ದಾರೆ ಎಂಬ ಬಗ್ಗೆ ಸುಳಿವು ಪಡೆದ ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ ಎಂದು ವಿಶ್ವ ಹಿಂದು ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಪ್ರವೀಣ್‌ ತೊಗಾಡಿಯಾ ಅವರು ದೃಶ್ಯ ಮಾಧ್ಯಮದ ಮುಂದೆ ಕಣ್ಣೀರು ಸುರಿಸಿ ತಾವೆದುರಿಸುತ್ತಿರುವ ದಾರುಣ ಪರಿಸ್ಥಿತಿಯನ್ನು ವಿವರಿಸಿದರು.

ಪ್ರವೀಣ್‌ ತೊಗಾಡಿಯಾ ಅವರು ನಿನ್ನೆ ಸೋಮವಾರ ನಾಪತ್ತೆಯಾಗಿದ್ದು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ  ಪತ್ತೆಯಾಗಿದ್ದರು. ಇಂದು ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿ ತಾವು ನಾಪತ್ತೆಯಾಗಬೇಕಾಗಿ ಬಂದ ಅನಿವಾರ್ಯ ಸ್ಥಿತಿಯನ್ನು ವಿವರಿಸಿದರು.

“ನನ್ನ ಧ್ವನಿಯನ್ನು ಶಾಶ್ವತವಾಗಿ ಮೌನಗೊಳಿಸುವ ಹುನ್ನಾರದ ಭಾಗವಾಗಿ ನನ್ನನ್ನು ರಾಜಸ್ಥಾನ್‌ ಪೊಲೀಸರು ಎನ್‌ಕೌಂಟರ್‌ ಮಾಡಿ ಮುಗಿಸಲಿದ್ದಾರೆ ಎಂದು ಯಾರೋ ಒಬ್ಬರು ನನಗೆ ತಿಳಿಸಿದರು, ಎನ್‌ಕೌಂಟರ್‌ನಿಂದ ತಪ್ಪಿಸಿಕೊಳ್ಳಲು ನಾನು ನಾಪತ್ತೆಯಾಗಬೇಕಾಯಿತು” ಎಂದವರು ಹೇಳಿದರು.

ಸಂಘಪರಿವಾರದೊಳಗೆ ಬುಗಿಲೆದ್ದಿರುವ ಬಿಜೆಪಿ, ವಿಎಚ್’ಪಿ  ಸಮರವನ್ನು ಎತ್ತಿ ತೋರಿಸುವ  ರೂಪದಲ್ಲಾಗಿತ್ತು ಇಂದು ತೊಗಾಡಿಯಾ ಬಹಿರಂಗ ಪಡಿಸಿದ ವಿಷಯಗಳು.ಗುಜರಾತಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ತೊಗಾಡಿಯಾ ಶ್ರಮಿಸಿದ್ದು, ಆದ್ದರಿದ ವಿಎಚ್’ಪಿ ಯ ನೇತೃಸ್ಥಾನದಿಂದ ತೊಗಾಡಿಯಾ ರನ್ನು ಕೆಳಗಿಳಿಸುವಂತೆ ನರೇಂದ್ರ ಮೋದಿಯವರು ಆರ್ ಎಸ್ ಎಸ್ ಗೆ ತಿಳಿಸಿದ್ದರು. ಆದರೂ ವಿಎಚ್’ಪಿ ಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ತೊಗಾಡಿಯಾ ಪುನರಾಯ್ಕೆ ಗೊಂಡರು .ಈ ಹಿನ್ನಲೆಯಲ್ಲಿ ಪೋಲೀಸರ ಸಹಕಾರದಿಂದ ತೊಗಾಡಿಯಾರನ್ನು ಬೇಟೆಯಾಡುತ್ತಿದ್ದಾರೆ ಎಂದು ವಿಎಚ್’ಪಿ ಆರೋಪಿಸಿದೆ.

 

Leave a Reply

Your email address will not be published. Required fields are marked *

error: Content is protected !!