ಬಿಜೆಪಿಯವರು ಮಾತ್ರ ಹಿಂದೂ ಧರ್ಮದ ರಕ್ಷಕರೇ?: ಸಿಎಂ ಪ್ರಶ್ನೆ

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂತ್ವವನ್ನು ಕೈಗೆತ್ತಿಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿಯವರು ಮಾತ್ರ ಹಿಂದೂ ಧರ್ಮದ ರಕ್ಷಕರಾ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಕಳೆದ 70 ವರ್ಷದಿಂದ ಕಾಂಗ್ರೆಸ್ ಹಿಂದು ಧರ್ಮದ ರಕ್ಷಣೆ ಮಾಡುತ್ತಾ ಬಂದಿದೆ ಎಂದು ಹಿಂದೂತ್ವವಾದಿಗಳಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಬಿಜೆಪಿಯವರು ಹಿಂದುತ್ವ ಎನ್ನುತ್ತಾರೆ. ಬಿಜೆಪಿಯವರಿಗೆ ಈಗ ಏನೂ ಉಳಿದಿಲ್ಲ, ಹಿಂದೂತ್ವ ಒಂದೇ ಉಳಿದಿರುವುದು ಎಂದು ವ್ಯಂಗ್ಯವಾಡಿದರು.ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಾವು ಸುಳ್ಳು ಹೇಳೋದು ಬೇಡ, ಸತ್ಯವನ್ನೇ ಹೇಳೋಣ, ಸುಳ್ಳು ಹೇಳೋದು ಬಿಜೆಪಿಯವರ ಕೆಲಸ ಎಂದು ದೂರಿದರು.

ಬಿಜೆಪಿಯವರ ಆರೋಪಕ್ಕೆ ನಾವು ಕಟುವಾಗಿ ತಿರುಗೇಟು ನೀಡಬೇಕು. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಕಾರ್ಯಾಗಾರ ಮಾಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!