ಸುಪ್ರಿಂಕೋರ್ಟ್ ಬಿಕ್ಕಟ್ಟು ಬಗೆಹರಿದಂತೆ ಕಾಣುತ್ತಿಲ್ಲ: ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌

ನವದೆಹಲಿ: ಸುಪ್ರೀಂ ಕೋರ್ಟಿನ ಬಿಕ್ಕಟ್ಟು ಬಗೆಹರಿದಂತೆ ಕಾಣುತ್ತಿಲ್ಲ ಎಂದು ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌ ಹೇಳಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ‘ಪೂರ್ತಿಯಾಗಿ ಬಗೆಹರಿಯುವ’ ನಿರೀಕ್ಷೆಯಿದೆ ಎಂದೂ ಅವರು ಹೇಳಿದ್ದಾರೆ.ನಾಲ್ವರು ಭಿನ್ನಮತೀಯ ನ್ಯಾಯಮೂರ್ತಿಗಳು ಮತ್ತು ಸಿಜೆಐ ನಡುವೆ ತಾವೇನಾದರೂ ಸಂಧಾನದ ಮಾತುಕತೆ ಮಾಡಿದ್ದೀರಾ ಎಂಬ ಪ್ರಶ್ನೆಗೆ, ಹಾಗೇನೂ ನಡೆದಿಲ್ಲ ಎಂದು ವೇಣುಗೋಪಾಲ್‌ ಉತ್ತರಿಸಿದರು.

ಅದೇ ವೇಳೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಪತ್ರಿಕಾಗೋಷ್ಠಿ ನಡೆಸಿದ್ದ ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಮಂಗಳವಾರ ಭೇಟಿ ಮಾಡಿ ಸುಮಾರು 15 ನಿಮಿಷ ಮಾತುಕತೆ ನಡೆಸಿದ್ದಾಗಿ ವರದಿಯಾಗಿದೆ.

ಮೂಲಗಳ ಪ್ರಕಾರ ಜಸ್ಟೀಸ್‌ ಎ.ಕೆ. ಸಿಕ್ರಿ ಮತ್ತು ಇತರೆ ಇಬ್ಬರು ನ್ಯಾಯಮೂರ್ತಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಇದು ಮೊದಲ ಹೆಜ್ಜೆ ಎನ್ನಲಾಗಿದೆ.

ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌, ರಂಜನ್ ಗೊಗೊಯ್​, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್​ ಅವರ ಜತೆ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಮಾತುಕತೆ ನಡೆಸಿದ್ದಾರೆ. ಆದರೆ, ಮಾತುಕತೆ ವಿಫಲವಾದ ಹಿನ್ನೆಲೆ ನಾಳೆ ಮತ್ತೆ ಭೇಟಿಯಾಗಲು ನಿರ್ಧಾರ ಕೈಗೊಳ್ಳಲಾಗಿದೆ.

ಜನವರಿ 12ರಂದು ನಾಲ್ವರು ಹಿರಿಯ ನ್ಯಾಯಾಧೀಶರಾದ ಜಸ್ಟಿಸ್‌ ಚಲಮೇಶ್ವರ್‌, ರಂಜನ್‌ ಗೊಗೋಯ್, ಮದನ್‌ ಬಿ. ಲೋಕುರ್‌ ಮತ್ತು ಕುರಿಯನ್ ಜೋಸೆಫ್‌ ಬಹಿರಂಗವಾಗಿಯೇ ಸರ್ವೋಚ್ಚ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ ಹರಿಹಾಯ್ದಿದ್ದರು.

 

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!