janadhvani

Kannada Online News Paper

ಪ್ರವಾದಿ ನಿಂದನೆ: ಕರ್ನಾಟಕ ರಾಜ್ಯ ಸುನ್ನೀ ಮ್ಯಾನೇಜ್’ಮೆಂಟ್ ಅಸೋಷಿಯೇಶನ್ ಖಂಡನೆ

ಮಂಗಳೂರು : ಜಗತ್ತಿಗೆ ಮಾದರಿ ಜೀವನ ಕ್ರಮವನ್ನು ಪರಿಚಯಿಸಿ ನುಡಿದಂತೆಯೇ ಬದುಕಿ ಬಾಳಿದ ಲೋಕ ನಾಯಕ ಹಝ್ರತ್ ಮುಹಮ್ಮದ್ ಪೈಗಂಬರ್ (ಸ.ಅ) ರ ವ್ಯಕ್ತಿತ್ವ ವನ್ನು ಅಶ್ಲೀಲ ಮತ್ತು ಅಪವಾದಗಳೊಂದಿಗೆ ನಿರೂಪಿಸಿ ಮುಸ್ಲಿಮ್ ಜನ- ಮನವನ್ನು ಘಾಸಿಗೊಳಿಸಿದ ಸುವರ್ಣ ಕನ್ನಡ ಟಿ.ವಿ.ಚಾನಲ್ ನ ನಿರೂಪಕ ಅಜಿತ್ ಹನುಮಕ್ಕ ಘಟನೆ ಖಂಡನೀಯವಾಗಿದೆ.

ಅಜಿತ್ ಹನುಮಕ್ಕನನ್ನು ಭಾರತೀಯ ದಂಡ ಸಂಹಿತೆ ಗೆ ಅನುಗುಣವಾಗಿ ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಸುನ್ನೀ ಮ್ಯಾನೇಜ್’ಮೆಂಟ್ ಅಸೋಷಿಯೇಶನ್ (ರಿ) SMA ರಾಜ್ಯಾ ಉಪಧ್ಯಕ್ಷರಾದ ಹಾಜೀ ಕೆ.ಎ.ಹಮೀದ್ ಕೊಡಂಗಾಯಿ ಅವರು ಹೇಳಿದರು.

ಇಂತಹ ಮಾದ್ಯಮದವರು ಸಮಾಜಕ್ಕೆ ಅಪಾಯಕಾರಿ. ಇಂತಹ ಹೇಳಿಕೆ ಗಳ ಮೂಲಕ ಸಮಾಜದಲ್ಲಿ ಅಶಾಂತಿ ಉಂಟಾಗಲಿದೆ ಸಮಾಜದ ಶಾಂತಿ ಒಗ್ಗಟ್ಟನ್ನು ಮುರಿಯುವ ಇಂತವರ ವಿರುದ್ಧ ಸ್ವಯಂ ಪ್ರೇರಿತರಾಗಿ ಅಧಿಕಾರಿಗಳು ಕೇಸು ದಾಖಲಿಸಬೇಕು ಎಂದು ಅವರು ಹೇಳಿದರು. ಮುಸ್ಲಿಂ ಸಮುದಾಯದ ಜನಪ್ರತಿನಿದಿಗಳು ವಿಧಾನಸಭೆಯೊಳಗೆ ಧ್ವನಿ ಎತ್ತಬೇಕು ಇಲ್ಲವಾದರೆ ಅಂತವರು ಮುಸ್ಲಿಮ್ ಸಮುದಾಯದ ನಾಯಕರೆಂದು ಹೇಳಲು ಯಾವ ನ್ಯೆತಿಕ ಹಕ್ಕಿದೇ ಎಂದು ಅವರು ಪ್ರಶ್ನಿಸಿದರು.

ಪ್ರವಾದಿ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ. ಆದರೆ, ಪೊಲೀಸ್ ಇಲಾಖೆ ಮಾತ್ರ ಈ ಪ್ರಕರಣವನ್ನು ಲಘುವಾಗಿ ಪರಿಘಣಿಸಿ, ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸಿಲ್ಲ ಎಂದು ದೂರಿದರು ಈ ಬಗ್ಗೆ ಪೊಲೀಸ್ ಇಲಾಖೆ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಇದರ ವಿರುದ್ಧ ಹೋರಾಟ ಅನಿವಾರ್ಯ ಏಂದು ಅವರು ನುಡಿದರು.

error: Content is protected !! Not allowed copy content from janadhvani.com