janadhvani

Kannada Online News Paper

ತ್ರಿವಳಿ ತಲಾಖ್ ಮಸೂದೆ-ಲೋಕಸಭೆಯಲ್ಲಿಂದು ಚರ್ಚೆ

ನವದೆಹಲಿ (ಡಿ.27): ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿದ್ದು ವಿವಾದಾತ್ಮಕ ತ್ರಿವಳಿ ತಲಾಖ್​ ಮಸೂದೆ ಕುರಿತು ಚರ್ಚೆ ನಡೆಸಲಿದೆ.
ಈ ಮಸೂದೆ ಕುರಿತು ಚರ್ಚೆ ಮಾಡಲು ಸಂಸದರು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿ ಈಗಾಗಲೇ ಬಿಜೆಪಿ ತ್ರಿ ಲೈನ್​ ವಿಪ್​ ಜಾರಿಮಾಡಿದೆ.

ಕಳೆದ ವಾರ  ಲೋಕಸಭೆಯಲ್ಲಿ ಈ ಮಸೂದೆ ಮಂಡನೆ ಚರ್ಚೆಯಲ್ಲಿ ಭಾಗಿಯಾಗುವುದಾಗಿ ಕಾಂಗ್ರೆಸ್​ ಸಮ್ಮತಿ ಸೂಚನೆ ನೀಡಿತು. ವಿಪಕ್ಷಗಳಿಂದ  ಈ ಚರ್ಚೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ಭರವಸೆ ಕೂಡ ನೀಡಲಾಗಿತ್ತು.ಈ ಕುರಿತು ಚರ್ಚೆ ಮಾಡಲು ಕಾಂಗ್ರೆಸ್ ಕೂಡ​ ತಮ್ಮ ಸಂಸದರಿಗೆ ವಿಪ್​ ಜಾರಿ ಮಾಡಿತು.

ಇನ್ನು ಈ ಕುರಿತು ಒಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ, ನಾವು ಈ ಕುರಿತು ಚರ್ಚೆಯಲ್ಲಿ ಭಾಗಿಯಾಗಿ ನಮ್ಮ ಅಭಿಪ್ರಾಯವನ್ನು ನೀಡುತ್ತೇವೆ. ಧರ್ಮದ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಕೂಡ ನಾವು ಮನವಿ ಮಾಡುತ್ತೇವೆ ಎಂದರು.

ತ್ರಿವಳಿ ತಲಾಖ್​ ಅಪರಾಧ ಎಂದು ಘೋಷಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ನೀಡಲು ಸಮ್ಮತಿ ಸೂಚಿಸಿತ್ತು. ತ್ರಿವಳಿ ತಲಾಖ್​ ಕಾನೂನು ಬಾಹಿರ ಮತ್ತು ಜಾಮೀನು ರಹಿತ ಕ್ರಿಮಿನಲ್​ ಅಪರಾಧವಾಗಿದ್ದು, ತಲಾಖ್​ ನೀಡುವ ಮುಸ್ಲಿಂ ಪುರಷರಿಗೆ ಜೈಲು ಶಿಕ್ಷೆಯನ್ನು ಈ ಮಸೂದೆ ಪ್ರಸ್ತಾಪಿಸಿದೆ. ಈ ಹಿಂದೆ ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆದಿತ್ತು. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.

error: Content is protected !! Not allowed copy content from janadhvani.com