ಚೆಂಬರಿಕ ಖಾಝಿ ನಿಗೂಢ ಮರಣ ಪ್ರಕರಣ: ಚುರುಕುಗೊಂಡ ಸಿಬಿಐ ತನಿಖೆ

ಕಾಞಂಗಾಡ್: ಮಂಗಳೂರು ಖಾಝಿಯಾಗಿದ್ದ  ಸಿ.ಎಂ ಅಬ್ದುಲ್ಲಾ ಮೌಲವಿಯವರ ಮರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಆಟೋ ಡ್ರೈವರ್ ನನ್ನು ಸಿಬಿಐ ತನಿಖೆ ನಡೆಸಿದೆ. ಆದೂರಿನ ಪರಪ್ಪ ನಿವಾಸಿ ಪಿ.ಎ. ಅಶ್ರಫ್‌ರಿಂದ ಸಿಬಿಐ ಕೇರಳ ಸ್ಪೆಷಲ್ ಆಫೀಸರ್ ಡಿವೈಎಸ್ಪಿ ಕೆ.ಜೆ ಡಾರ್ವಿನ್ ಕೊಚ್ಚಿ ಆಫೀಸ್ ನಲ್ಲಿ ನಡೆದ ವಿಚಾರಣೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಸಂಶಯಾಸ್ಪದ ನಾಲ್ವರ ಹೆಸರುಗಳನ್ನು ಅಶ್ರಫ್ ಸಿಬಿಐ ಮುಂದೆ ತಿಳಿಸಿರುವುದಾಗಿ ತಿಳಿದುಬಂದಿದೆ. ಖಾಝಿಯವರ ಮರಣದ ಹಿಂದಿನ ದಿವಸ ಆಲುವ ಸ್ವದೇಶಿ ಬಾಬು, ನಿಶಾಂತ್ ಎಂಬಿಬ್ಬರನ್ನು ಖಾಝಿಯವರ ಮನೆ ಹತ್ತಿರ ತನ್ನ ಆಟೋದಲ್ಲಿ ಬಿಟ್ಟು ಬಂದಿರುವುದಾಗಿ ಅಶ್ರಫ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ನೀಲೇಶ್ವರಂ ನಿವಾಸಿ ಸುಲೈಮಾನ್ ವೈದ್ಯರ ನಿರ್ದೇಶನದಂತೆ ಅವರನ್ನು ಅಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ ಅಶ್ರಫ್,  ಜ.4 ಮತ್ತು ಮೌಲವಿಯವರು ನಿಗೂಢವಾಗಿ ನಿಧನಗೊಂಡ ಫೆ.14 ರ ಮಧ್ಯೆ ಆರು ಬಾರಿ ಅವರಿಬ್ಬರನ್ನು ರೈಲ್ವೆ ನಿಲ್ದಾಣದಿಂದ ತನ್ನ ರಿಕ್ಷಾದಲ್ಲಿ ಕರೆತಂದಿರುವುದಾಗಿ ತಿಳಿಸಿದ್ದಾರೆ. ನಿಲೇಶ್ವರಂನ ಒಂದು ರೆಸಾರ್ಟ್ ಸಮೇತ ಹಲವು ಕಡೆ ಅವರನ್ನು ಕೊಂಡೊಯ್ದಿರುವುದಾಗಿ ತಿಳಿಸಿದ್ದು, ಸುಲೈಮಾನ್ ಮೌಲವಿ, ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ರಾಜನ್ ಇವರಿಬ್ಬರೊಂದಿಗೆ ಸುದೀರ್ಘ ಚರ್ಚೆ ನಡೆಸಿರುವ ಬಗ್ಗೆ ಅಶ್ರಫ್ ಮಾಹಿತಿ ನೀಡಿದ್ದಾರೆ.

ಒಂದು ಬಾರಿ ದೊಡ್ಡ ಮೊತ್ತದ ಹಣವನ್ನು ಬಾಬು ಮತ್ತು ನಿಶಾಂತ್ ಕೈಗೆ ನೀಡುವುದನ್ನು ಅಶ್ರಫ್ ನೋಡಿರುವುದಾಗಿ ತಿಳಿಸಿದ್ದಾರೆ. ಆ ವೇಳೆ ಸುಲೈಮಾನ್ ವೈದ್ಯರ ಮಗಳ ಗಂಡನಾದ ಅಶ್ರಫ್ ನೀಲೇಶ್ವರಂ ಮಾರ್ಕೆಟ್ ಜಂಕ್ಷನ್ ನಲ್ಲಿ ಆಟೋ ಡ್ರೈವರಾಗಿ ದುಡಿಯುತ್ತಿದ್ದರು.

ಆಶ್ರಫ್ ನೀಡಿದ ಮಾಹಿತಿಯನುಸಾರ ಮೌಲವಿ ಪ್ರಕರಣ ವನ್ನು ಮರು ವಿಚಾರಣೆ ನಡೆಸುವಂತೆ ಸಮಸ್ತ ಪಿಆರ್‌ಒ ಅಡ್ವಕೆಟ್. ಮುಹಮ್ಮದ್ ತ್ವಯ್ಯಿಬ್ ಖುದವಿ ಹೈಕೋರ್ಟ್ ಗೆ ಸಮರ್ಪಿಸಿದ ದಾವೆಯಲ್ಲಿ ತಿಳಿಸಿದ ಕಾರಣ ಅಶ್ರಫ್ ರಿಂದ ಮತ್ತೊಮ್ಮೆ ಧ್ವನಿ ಮುದ್ರಣ ದಾಖಲಿಸಲಾಗಿದೆ. ಅದಲ್ಲದೆ ಮುಹಮ್ಮದ್ ತ್ವಯ್ಯಿಬ್‌ರ ಧ್ವನಿ ಯನ್ನೂ ಸಿಬಿಐ ಸಂಗ್ರಹಿಸಿದ್ದಾರೆ.  ಅವಶ್ಯ ಎಣಿಸಿದಾಗ ಹಾಜರಾಗುವಂತೆ  ಇವರಿಗೆ ತಿಳಿಸಲಾಗಿದೆ. ಧ್ವನಿಯ ವಿವರಗಳನ್ನು ಹೈಕೋರ್ಟ್ ಮತ್ತು ಎರ್ನಾಕುಲಂ ಸಿಜೆಎಂ ನ್ಯಾಯಾಲಯಕ್ಕೆ ನಿಡುವುದಾಗಿ ಸಿಬಿಐ ತಿಳಿಸಿದೆ. ಮಾಹಿತಿಯಂತೆ ಸುಲೈಮಾನ್ ಮೌಲವಿ, ನೀಲೇಶ್ವರಂ ನ ರಾಜನ್ ಮುಂತಾದವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!