ಸೌದಿ ಟೂರಿಸ್ಟ್ ವಿಸಾ: ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ

ರಿಯಾದ್: ಟೂರಿಸ್ಟ್ ವಿಸಾಗೆ ಸಂಬಂಧಿಸಿದ ಕರಡು ರೇಖೆಗಳು ಸಿದ್ದವಾಗಿದೆ ಎಂದು ಸೌದಿ ಕಮ್ಮೀಶನ್ ಫಾರ್ ಟೂರೀಸಂ ಆ್ಯಂಡ್ ನ್ಯಾಷನಲ್ ಹೆರಿಟೇಜ್ ತಿಳಿಸಿದೆ. ಅನುಮತಿ ನೀಡಲ್ಪಟ್ಟ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ.

ಆಂತರಿಕ, ವಿದೇಶಾಂಗ, ಸೌದಿ ಕಮೀಷನ್ ಫಾರ್ ಟೂರೀಸಂ ಆ್ಯಂಡ್ ನ್ಯಾಷನಲ್ ಹೆರಿಟೇಜ್ ಮುಂತಾದವುಗಳ ಸಂಯುಕ್ತಾಶ್ರಯದಲ್ಲಿ ಟೂರಿಸ್ಟ್ ವಿಸಾಗೆ ಸಂಬಂದಿಸಿದ ಕಾರ್ಯಸೂಚಿಯನ್ನು ತಯಾರಿಸಲಾಗಿದೆ. ಪ್ರಥಮ ಪಟ್ಟಿಯಲ್ಲಿ ಯೂರೋಪಿಯನ್ ದೇಶಗಳು, ಲಾಟಿನ್ ಅಮೆರಿಕನ್ ದೇಶಗಳು, ಜಪಾನ್, ಚೈನಾ, ಸಿಂಗಪುರ್, ಮಲೇಷಿಯಾ, ಬ್ರೂಣೆ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳ ಹೆಸರಿದೆ.

ಕನಿಷ್ಟ ನಾಲ್ಕು ಮಂದಿಯ ಸಂಘಕ್ಕೆ ವಿಸಾ ನೀಡಲಾಗುತ್ತದೆ. ಅಂಗೀಕರಿಸಿದ ಟೂರ್ ಏಜೆನ್ಸಿಗಳ ಸಹಕಾರದೊಂದಿಗೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುವು ಮಾಡಲಾಗುತ್ತದೆ. ಆನ್ ಲೈನ್ ಮುಖಾಂತರ ನೀಡಲಾಗುವ ರೂಪುರೇಷೆಯಂತೆ ವಿಸಾ ನೀಡಲಾಗುತ್ತದೆ ಎನ್ನಲಾಗಿದೆ.ಮಹಿಳೆಯರಿಗೆ ವಿಸಾ ಅನುಮತಿಸಲು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಅಧಿಕೃತರು ವ್ಯಕ್ತಪಡಿಸಿದ್ದಾರೆ.

ಆಂತರಿಕ, ವಿದೇಶಾಂಗ ಸಚಿವಾಲಯಗಳ ಕ್ಲಿಯರೆನ್ಸ್ ಪಡೆದ ನಂತರ ಮಾತ್ರ ವಿಸಾಗೆ ಅನುಮತಿ ಲಭಿಸಲಿದೆ. ಕಮೀಷನ್ ಫಾರ್ ಟೂರೀಸಂ ಆ್ಯಂಡ್ ನ್ಯಾಷನಲ್ ಹೆರಿಟೇಜ್ ನ ಲೈಸೆನ್ಸ್ ಇರುವ ಸ್ಥಾಪನೆಗಳಿಗೆ ಯಾತ್ರಿಕರ ಸೇವಯ ಅನುಮತಿ ನೀಡಲಾಗುತ್ತದೆ. ಪ್ರತೀ ಟೂರಿಸ್ಟ್ ಸಂದರ್ಶಕರೊಂದಿಗೆ ಭಾಷೆ ಬಲ್ಲವನಾದ ಒಬ್ಬ ಟೂರಿಸ್ಟ್ ಗೈಡ್ ಇರಬೇಕು ಎನ್ನುವುದನ್ನು ಉಲ್ಲೇಖಿಸಲಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!