ವಿಮಾನಕ್ಕೆ ತಡೆ: UAE ಯ ಆರೋಪವನ್ನು ನಿಷೇಧಿಸಿದ ಖತ್ತರ್

ದುಬೈ/ದೋಹ: ಬಹರೈನ್‌ಗೆ ತೆರಳಿದ ತನ್ನ ಯಾತ್ರಾ ವಿಮಾನವನ್ನು ಖತ್ತರ್ ಯುದ್ದ ವಿಮಾನಗಳು ತಡೆದಿದೆ ಎಂದು ಯುಎಇ ಜನರಲ್ ಅಥಾರಿಟಿ ಆಫ್‌ ಸಿವಿಲ್ ಏವಿಯೇಷನ್‌ (ಜಿಸಿಎಎ) ಆರೋಪಿಸಿದೆ. ಆದರೆ, ಆರೋಪವನ್ನು ಖತ್ತರ್ ತಳ್ಳಿಹಾಕಿದೆ.

ಯುಎಇ ಯ ಅಧಿಕೃತ ಸುದ್ದಿ ಏಜೆನ್ಸಿಯಾದ ‘ವಾಂ’ ಈ ಸುದ್ದಿಯನ್ನು ಬಹಿರಂಗ ಪಡಿಸಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆಯಾಗಿದೆ ಇದೆಂದು ಸಿಸಿಎಎ ಆರೋಪಿಸಿದೆ. ಈ ರೂಟ್ನಲ್ಲಿ ಸ್ಥಿರವಾಗಿ ಸಂಚರಿಸುವ ವಿಮಾನವು ಸರಿಯಾದ ದಿಸೆಯಲ್ಲೇ ಸಂಚರಿಸುತ್ತಿತ್ತು. ಅಂತರಾಷ್ಟ್ರೀಯ ಅನುಮತಿ ಕೂಡ ಲಭಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಇ ಯುದ್ದ ವಿಮಾನ ಗಳು ಗಡಿ ಉಲ್ಲಂಘನೆ ಮಾಡಿರುವುದಾಗಿ ಈ ಹಿಂದೆ ಖತ್ತರ್ ಆರೋಪಿಸಿತ್ತು. ಕಳೆದ ಡಿಸೆಂಬರ್ 21 ಮತ್ತು ಜನವರಿ 3 ಕ್ಕೆ ಗಡಿ ಉಲ್ಲಂಘನೆ ನಡೆದಿರುವುದಾಗಿ ಆರೋಪಿಸಿ ವಿಶ್ವಸಂಸ್ಥೆಗೆ ದೂರನ್ನೂ ನೀಡಲಾಗಿತ್ತು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!