janadhvani

Kannada Online News Paper

ಮಾಜಿ ಉಸ್ತುವಾರಿ ಸಚಿವರ ಹೇಳಿಕೆ ಖಂಡನೀಯ- ಎಸ್ಸೆಸ್ಸೆಫ್

ಉಡುಪಿ:  ತನ್ನ ರಾಜಕೀಯ ಜೀವನದಲ್ಲಿ ಜಾತ್ಯತೀತ ಧೋರಣೆಯನ್ನು ಅನುಸರಿಸಿ ಎಲ್ಲಾ ಸಮುದಾಯದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾಗಿದ್ದ ಹಾಗೂ ಕಾಂಗ್ರೆಸ್ ನಾಯಕರಾದ ಶ್ರೀ ಪ್ರಮೋದ್ ಮದ್ವರಾಜ್ ರವರು ಒಂದು ಸಮುದಾಯದ ಕಾರ್ಯಕ್ರಮದಲ್ಲಿ ಕೇವಲ ಓಲೈಕೆಗಾಗಿ ಈ ದೇಶ ಕಂಡ ಧೀರ ಯೋಧ ಸ್ವಾತಂತ್ರ್ಯ ಹೋರಾಟಗಾರ ಹಝ್ರತ್ ಟಿಪ್ಪು ಸುಲ್ತಾನ್ ರ ಕುರಿತು ಅವಹೇಳನಕಾರಿ ಭಾಷಣ ಮಾಡಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ತಿಳಿಸಿದೆ.

ತಮ್ಮದೇ ಸರಕಾರ ಆಡಳಿತದಲ್ಲಿರುವಾಗ ಚಾಲ್ತಿಗೆ ತಂದ ಟಿಪ್ಪು ಜಯಂತಿ ಆಚರಣೆಯಲ್ಲಿ ವಿರೋಧವಿದ್ದರೆ ಸರ್ಕಾರದ ಅಂಗವಾಗಿದ್ದ ಸಚಿವರಿಗೆ ತಿಳಿಸಬಹುದಿತ್ತು, ಅದು ಬಿಟ್ಟು ತಾನು ಕಾರ್ಯಕ್ರಮದಲ್ಲಿ ಭಾಗವಹಿಸದ ತಪ್ಪನ್ನು ದೇವರ ಮೇಲೋ,ಅಥವಾ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಮೇಲೋ ಹೊರಿಸುವುದು ಸರಿಯಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಅಶ್ರಫ್ ರಝಾ ಅಂಜದಿ, ಸಚಿವರು ಈ ಬಗ್ಗೆ ಸಾರ್ವಜನಿಕರಲ್ಲಿ  ಕ್ಷಮೆ ಯಾಚಿಸಬೇಕಿದೆ ಎಂದು ತಿಳಿಸಿದರು.

 ‘ಶಾಸಕ, ಸಚಿವನಾಗಿದ್ದ ಅವಧಿಯಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ಅವಕಾಶವೇ ಸಿಗಲಿಲ್ಲ. ಬಹುಶಃ ದೇವರೇ ಭಾಗವಹಿಸುವುದಕ್ಕೆ ಅವಕಾಶ ಕೊಡಲಿಲ್ಲ ಎನಿಸುತ್ತಿದೆ’ 
‘ಟಿಪ್ಪು ಸುಲ್ತಾನ್ ಸೈನ್ಯ ಪೇತ್ರಿ ಚರ್ಚ್‌ ಮೇಲೆ ದಾಳಿ ಮಾಡಿ ನಾಶಮಾಡಿತ್ತು ಎಂಬ ಅಂಶ ಇತಿಹಾಸದಲ್ಲಿದೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದು ಸರಿಯೋ ತಪ್ಪೊ ಗೊತ್ತಿಲ್ಲ. ಆದರೆ, ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ’ 
ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ಡಿ.10ರಂದು ಬ್ರಹ್ಮಾವರದ ಪೇತ್ರಿ ಸೇಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಹೇಳಿಕೆ ನೀಡಿದ್ದರು.

error: Content is protected !! Not allowed copy content from janadhvani.com