ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರತಿಭೋತ್ಸವ : ಉಳ್ಳಾಲ ಡಿವಿಷನ್ ಚಾಂಪಿಯನ್

ಮಂಗಳೂರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭೋತ್ಸವವು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಅಲ್ – ಮದೀನಾ ವಿದ್ಯಾ ಸಂಸ್ಥೆ ಮಂಜನಾಡಿಯಲ್ಲಿ ನಡೆಯಿತು.ಶನಿವಾರ ಬೆಳಿಗ್ಗೆ 9:00 ಗಂಟೆಗೆ ಎಸ್.ವೈ.ಎಸ್,ಎಸ್ಸೆಸ್ಸೆಫ್ ನಾಯಕರು ದ್ವಜಾರೋಹಣ ಮಾಡುವುದರ ಮೂಲಕ ಪ್ರತಿಭೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.ಉದ್ಘಾಟನಾ ಸಮಾರಂಭವನ್ನು ಎಸ್.ವೈ.ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಯಂ.ಅಬೂಬಕ್ಕರ್ ಸಿದ್ಧೀಕ್ ಮೋಂಟುಗೋಳಿ, ಅಲ್- ಮದೀನಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಎಸ್.ವೈ.ಎಸ್ ರಾಜ್ಯ ಸದಸ್ಯ ಉಮರ್ ಸಖಾಫಿ ಎಡಪ್ಪಾಲ, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಚಂದಹಿತ್ತಿಲು ಶುಭ ಹಾರೈಸಿದರು.ಆದಿತ್ಯವಾರ ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಅಲ್- ಮದೀನಾ ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಲ್-ಮದೀನಾ ಮೇನೇಜರ್ ಅಬ್ದುಲ್ ಖಾದರ್ ಸಖಾಫಿ,ಅಲ್-ಮದೀನಾ ಮಸೀದಿ ಖತೀಬ್ ಅಂಜದಿ ಉಸ್ತಾದ್, ಕಾಂಗ್ರೆಸ್ ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗ ಅಧ್ಯಕ್ಷ ಕರೀಂ ಹಾಜಿ ನೆಕ್ಕರೆ,ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಫಿ ಕಾವಲ್ಕಟ್ಟೆ,ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಕೆ.ಎಂ ಮುಸ್ತಪ ನಯೀಮಿ ಮೋಂಟುಗೋಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಬಾವು ನೆಕ್ಕರೆ,ರಝಾಕ್ ಹಾಜಿ ಮಲಾರ್,ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್,ಇಸ್ಮಾಯಿಲ್ ಸ ಅದಿ ಕಿನ್ಯಾ,ಇಸ್ಮಾಯಿಲ್ ಸಅದಿ ಉರುಮಣೆ, ಎಸ್.ಜೆ.ಎಂ ಮೋಂಟುಗೋಳಿ ರೇಂಜ್ ಅಧ್ಯಕ್ಷ ಅಬ್ಬಾಸ್ ಸಖಾಫಿ ಮಡಿಕೇರಿ, ಇಶಾರ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ,ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರೆ, ಎಸ್.ವೈ.ಎಸ್ ನಾಯಕರಾದ ಅಬ್ದುಲ್ ರಹಿಮಾನ್ ಹಾಜಿ ಪ್ರಿಂಟೆಕ್,ಆಸಿಫ್ ಹಾಜಿ ಕೃಷ್ಣಾಪುರ,ಕೆ.ಸಿ.ಎಫ್ ಸದಸ್ಯರಾದ ಸಲೀಂ ಕನ್ಯಾಡಿ,ಇಕ್ಬಾಲ್ ಕೈರಂಗಳ,ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮೊಡಂತ್ಯಾರ್,ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೈರ್ ಮ್ಯಾನ್ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಜಿಲ್ಲಾ ಉಪಾಧ್ಯಕ್ಷರಾದ ಸೆರ್ಕಳ ಸಖಾಫಿ,ಕೆ.ಎಂ.ಎಚ್ ಕೊಂಬಾಳಿ ಝುಹ್ರಿ,ಕಾರ್ಯದರ್ಶಿಗಳಾದ ಸಲೀಂ ಹಾಜಿ ಬೈರಿಕಟ್ಟೆ,ಶರೀಫ್ ನಂದಾವರ,ಜಿಲ್ಲಾ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಸಖಾಫಿ ಬೆಳ್ತಂಗಡಿ,ಅಮ್ಮುಂಜೆ ಸಖಾಫಿ, ಜಮಾಲುದ್ದೀನ್ ಸಖಾಫಿ,ಸಯ್ಯದ್ ಖುಬೈಬ್ ತಂಙಳ್,ಸಮೀರ್ ಸುಳ್ಯ,ಜಬ್ಬಾರ್ ಕಣ್ಣೂರು,ಶರೀಫ್ ಸಖಾಫಿ ಕುಪ್ಪೆಟ್ಟಿ,ರಶೀದ್ ಹಾಜಿ ವಗ್ಗ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಫಾರೂಕ್ ಸಖಾಫಿ ಮದನಿ ನಗರ,ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.

 

ಸಮಾರೋಪ ಕಾರ್ಯಕ್ರಮದ ಮುಂಚೆ ಪೊಟ್ಟೊಳಿಕೆಯಿಂದ ಅಲ್ ಮದೀನಾ ತನಕ ರೈಟ್ ಟೀಮ್ ಸದಸ್ಯರಿಂದ ಆಕರ್ಷಕ ರ್ಯಾಲಿ ನಡೆಯಿತು.

ಶನಿವಾರ ಬೆಳಿಗ್ಗೆಯಿಂದ ಆದಿತ್ಯವಾರ ಸಂಜೆ ತನಕ 7 ವಿಭಾಗಗಳಲ್ಲಿ ಒಟ್ಟು 96 ಪೈಪೋಟಿ ಕೂಡಿದ ಸ್ಪರ್ಧೆಗಳಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಚಾಂಪಿಯನ್ ಆಗಿಯೂ,ಬೆಳ್ತಂಗಡಿ ಡಿವಿಷನ್ ದ್ವಿತೀಯ ಸ್ಥಾನವನ್ನೂ,ಉಪ್ಪಿನಂಗಡಿ ಡಿವಿಷನ್ ತೃತೀಯ ಸ್ಥಾನವನ್ನು ಪಡೆಯಿತು.

ಜಿಲ್ಲಾ ಸದಸ್ಯ ಮುನೀರ್ ಅಹ್ಮದ್ ಕಾಮಿಲ್ ನಿರೂಪಿಸಿದರು.ಜಿಲ್ಲಾ ಪ್ರತಿಭೋತ್ಸವ ಸಮಿತಿ ಕನ್ವೀನರ್ ಮಹಮ್ಮದ್ ಅಲಿ ತುರ್ಕಳಿಕೆ ಸ್ವಾಗತಿಸಿ,ಕೊನೆಗೆ ವಂದಿಸಿದರು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!