ದುಬೈ:ಎಮಿಗ್ರೇಷನ್ ಅಧಿಕಾರಿ ಹೆಸರಲ್ಲಿ ನಕಲಿ ಫೋನ್ ಕರೆಗಳ ಬಗ್ಗೆ ಎಚ್ಚರಿಕೆ

ದುಬೈ: ಎಮಿಗ್ರೇಷನ್ ಅಧಿಕಾರಿಯ ಮಾರು ವೇಶದಲ್ಲಿ ಯುಎಇ ಯಲ್ಲಿರುವ ಭಾರತೀಯ ಪ್ರಜೆಗಳಿಗೆ ನಕಲಿ ಕರೆಗಳು ಬರುವ ಬಗ್ಗೆ ಜಾಗರೂಕತೆಯಿಂದ ಇರುವಂತೆ ದುಬೈ ಭಾರತೀಯ ದೂತಾವಾಸ ಕೇಂದ್ರದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ಕರೆಗಳ ಬಗ್ಗೆ ಹಲವು ದೂರುಗಳು ಲಭಿಸಿದ ಹಿನ್ನಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ದುಬೈ ಎಮಿಗ್ರೇಷನ್ ವಿಭಾಗವಾದ, ಜನರಲ್ ಡಯರಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನ್ ಅಫೇರ್ಸ್ ನ ಟಾಲ್ ಫ್ರೀ ಸಂಖ್ಯೆಯಾದ 8005111 ರಿಂದ ಅಥವಾ ಗ್ರಾಹಕ ಸೇವಾ ಕೇಂದ್ರ ದ ಕಾಲ್ ಸೆಂಟರ್ ಸಂಖ್ಯೆಯಾದ 04-3139999 ಎಂಬ ನಂಬರಿನಿಂದ ಎನ್ನುವ ರೀತಿಯಲ್ಲಿ ಕರೆಗಳು ಬರುತ್ತಿವೆ. ಕರೆಗಳ ವಿಶ್ವಾಸಾರ್ಹತೆಯಲ್ಲಿ ದೃಢೀಕರಣ ಉಂಟಾಗುವಂತೆ ಅಧಿಕೃತ ಸಂಖ್ಯೆಯು ಕರೆ ಸ್ವೀಕರಿಸಿದ ವ್ಯಕ್ತಿಯ ಫೋನ್ ನಲ್ಲಿ ಸ್ಪಷ್ಟವಾಗಿ ಕಾಣುವಂತೆ ಸಜ್ಜುಗೊಳಿಸಲಾಗಿದೆ. ಮಾತನಾಡುತ್ತಾ, ಕರೆ ಸ್ವೀಕರಿಸಿದ ವ್ಯಕ್ತಿಯ ದುಬೈನಲ್ಲಿನ ಐಡೆನ್ಟಿಟಿ ಮತ್ತು ಪಾಸ್‌ಪೋರ್ಟ್ ನ ಮಾಹಿತಿಯನ್ನು ತಿಳಿಸಿದಾಗ ಅಧಿಕೃತ ಕರೆಯಾಗಿರಬಹುದು ಎಂದು ನಂಬುತ್ತಾರೆ.

ನಂತರ ತಮ್ಮ ನಂಬರ್ ಜಿ.ಡಿ.ಆರ್.ಎಫ್ ನಿಂದ ಲಭಿಸಿರುವುದಾಗಿ ನಂಬಿಸಿ ತಾವು ಅಪರಾಧ ದಲ್ಲಿ ತೊಡಗಿಸಿರುವುದಾಗಿ ದಾಖಲೆಗಳು ಇದ್ದು, ಅವುಗಳಿಂದ ಪಾರಾಗಬೇಕಾದರೆ ಹಣ ಪಾವತಿಸುವಂತೆ ಕೋರಲಾಗುವ ರೀತಿಯಲ್ಲಿ ಮಾತು ಮುಂದುವರಿಯುತ್ತದೆ.

ಇದೇ ವೇಳೆ ಪಾಸ್ಪೋರ್ಟ್ ಸೇವೆಗಳನ್ನು ಒದಗಿಸುತ್ತಿರುವ ಬಿ.ಎಲ್.ಎಸ್ ಕೇಂದ್ರದಿಂದ ಮಾಹಿತಿ ಸೋರಿಕೆಯಾಗುವ ಯಾವುದೇ ಸಾಧ್ಯತೆ ಇಲ್ಲ ಎಂದು ತಿಳಿಸಿದೆ. ಭಾರತೀಯ ದೂತಾವಾಸ ಕೇಂದ್ರದ ಅನುಮತಿ ಇಲ್ಲದೆ ಇಂತಹ ಸೂಕ್ಷ್ಮ ಮಾಹಿತಿಯನ್ನು ಹಸ್ತಾಂತರಿಸುವುದು ಸಾಧ್ಯವಿಲ್ಲ ಎನ್ನಲಾಗಿದ್ದು, ಇದಕ್ಕಾಗಿ ಉನ್ನತ ಮಟ್ಟದ ಸುರಕ್ಷಾ ಸನ್ನಾಹಗಳನ್ನು ಏರ್ಪಡಿಸಲಾಗಿದೆ ಎಂದು ಸಂಬಂದಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಹಲವಾರು ಕರೆಗಳು ಬಂದಿರುವುದಾಗಿ ದೂರುಗಳು ದಾಖಲಾಗಿದೆ. ಭಾರತೀಯ ಅಥಾರಿಟಿಗಳು ಅಥವಾ ಯುಎಇ ಎಮಿಗ್ರೇಷನ್ ಅಧಿಕೃತರು ನೇರವಾಗಿ ಭಾರತೀಯ ಅನಿವಾಸಿಗಳನ್ನು ಫೋನಿನ ಮುಖಾಂತರ ಸಂಪರ್ಕಿಸುವುದಿಲ್ಲ.

ಅಪರಾಧಕ್ಕೆ ಸಂಬಂಧಿಸಿದ ಮತ್ತಿತರ ಆವಶ್ಯತೆಗಾಗಿ ಆಯಾಯ ಏಜನ್ಸಿ ಮೂಲಕ ಅಥವಾ ಅಧಿಕೃತ ಮೂಲಗಳಾದ ಇ-ಮೇಲ್ ಮೂಲಕವೋ ತಿಳಿಸಲಾಗುತ್ತದೆ. ಆದ್ದರಿಂದ ಇಂತಹ ನಕಲಿ ಕಾಲ್ ಗಳನ್ನು ಮಾಡುವವರಿಗೆ ನಿಮ್ಮ ಮಾಹಿತಿಯನ್ನು ನೀಡ ಬೇಡಿ ಎಂದು ಭಾರತೀಯ ದೂತವಾಸ ಕೇಂದ್ರ, ಪಾಸ್‌ಪೋರ್ಟ್, ಅಟಂಟೇಶನ್, ಅಟಸ್ಟೇಶನ್, ಕಮ್ಯೂನಿಟಿ ಅಫೇರ್ಸ್ ಆ್ಯಂಡ್ ವೆಲ್ಫೇರ್ ಅಧಿಕಾರಿ ಪ್ರೇಮ್ ಚಂದ್ ವ್ಯಕ್ತಪಡಿಸಿದ್ದಾರೆ. ಮೆಘಾ ರಾಫೆಲ್ ಅಥವಾ ಮತ್ಸರಗಳು, ಉಚಿತ ಆಫರ್ಗಳಿಗೆ ರಹಸ್ಯ ಮಾಹಿತಿಗಳನ್ನು ನೀಡ ಬಾರದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!