ದುಬೈ: ಎಮಿರೇಟ್ಸ್ ವಿಮಾನವು ಯಾರಿಗೂ ಉಚಿತ ಟಿಕೆಟ್ ನೀಡುತ್ತಿಲ್ಲ, ಈ ಕುರಿತು ಪ್ರಚಾರ ಗೊಂಡಿರುವ ವಾರ್ತೆಯು ಸತ್ಯಕ್ಕೆ ದೂರ ಎಂದು ಎಮಿರೇಟ್ಸ್ ಅಧಿಕೃತರು ವ್ಯಕ್ತಪಡಿಸಿದ್ದಾರೆ.
33 ನೇ ವರ್ಷಾಚರಣೆ ಪ್ರಯುಕ್ತ ಎಮಿರೇಟ್ಸ್, ಪ್ರಯಾಣಿಕರಿಗೆ ತಲಾ 2 ಟಿಕೆಟ್ ಉಚಿತವಾಗಿ ನೀಡುತ್ತಿದೆ ಎಂದು ವೆಬ್ಸೈಟ್ ಒಂದು ವರದಿ ಮಾಡಿತ್ತು. ಇದು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಪ್ರಚಾರ ಗೊಂಡ ಹಿನ್ನಲೆಯಲ್ಲಿ ಎಮಿರೇಟ್ಸ್ ಅಧಿಕೃತರು ಪ್ರಕಟಣೆ ಹೊರಡಿಸಿದ್ದಾರೆ.
ಎಮಿರೇಟ್ಸ್ ವಿಮಾನವು ನಿಮಗೆ ಅತ್ಯುತ್ತಮ ಸೇವೆ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವವರಿಗೆ ಟಿಕೆಟ್ ಉಚಿತವಾಗಿ ಲಭಿಸುತ್ತದೆ ಎಂದೂ, ಇನ್ನು ಕೇವಲ 196 ಟಿಕೆಟ್ಗಳು ಮಾತ್ರ ಉಳಿದಿರುವುದು ಎಂದಾಗಿತ್ತು ವರದಿ.ಇದರನ್ವಯ ಜನರು ಎಮಿರೇಟ್ಸ್ ಅಧಿಕೃತರನ್ನು ಸಂಪರ್ಕಿಸಿದ್ದರು. ಈ ಹಿಂದೆ ಕೂಡಾ ಹಲವು ವಿಮಾನ ಕಂಪನಿಗಳ ಹೆಸರಿನಲ್ಲಿ ಇಂತಹಾ ಸುಳ್ಳು ವರದಿಗಳು ಪ್ರಚಾರ ಗೊಂಡಿದ್ದವು.