ಕರ್ನಾಟಕ ಜಂಇಯ್ಯತುಲ್ ಉಲಮಾ ಬಹರೈನ್ ಸಮಿತಿ ವತಿಯಿಂದ ಜೀಲಾನಿ ಸಂಗಮ ಹಾಗೂ ಅನುಸ್ಮರಣಾ ಕಾರ್ಯಕ್ರಮ

ಬಹರೈನ್ : ಕರ್ನಾಟಕ ಜಂಇಯ್ಯತುಲ್ ಉಲಮಾ ಬಹರೈನ್ ಸಮಿತಿ ವತಿಯಿಂದ ಜೀಲಾನಿ ಸಂಗಮ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಮಾರಂಭವು ಇತ್ತೀಚೆಗೆ ಸೌದಿ ರೆಸ್ಟೋರೆಂಟ್ ಮನಾಮದಲ್ಲಿ ನಡೆಯುತು. ಜಂಇಯ್ಯತುಲ್ ಉಲಮಾ ಡೈರೆಕ್ಟರ್ ಅಲಿ ಮುಸ್ಲಿ ಯಾರ್ ಕೊಡಗು ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಬಶೀರ್ ಸಅದಿ ನಾಳ ಸ್ವಾಗತ ಭಾಷಣ ಮಾಡಿದರು.
ಉಪಾಧ್ಯಕ್ಷ ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿ ಸಮಾರಂಭವನ್ನು ಉದ್ಘಾಟಿಸಿದರು.
ಬಹು ಅಬೂಬಕ್ಕರ್ ಮದನಿ ಮಂಚಿ ಉಸ್ತಾದರು ಜೀಲಾನಿ ಸಂದೇಶ ಹಾಗೂ ಅನುಸ್ಮರಣಾ ಭಾಷಣವನ್ನು ಮಾಡಿದರು.
ಬಶೀರ್ ಸಅದಿ ನಾಳ ಉಸ್ತಾದರು ಫತುಹುಲ್ ಮುಈನ್ ತರಗತಿಯನ್ನು ಉದ್ಘಾಟಿಸಿದರು.
ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್.ಎಂ ಹಾಗೂ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಎಡ್ಮಿನಿಸ್ಟ್ರೇಷನ್ ವಿಂಗ್ ಚೈರ್ಮಾನ್ ಬಶೀರ್ ಕಾರ್ಲೆ ಶುಭಾಶಂಶ ಭಾಷಣವನ್ನು ಮಾಡಿದರು. ಜಂಇಯ್ಯತುಲ್ ಉಲಮಾ ಪದಾಧಿಕಾರಿಗಳಾದ ಅಹ್ಮದ್ ಮುಸ್ಲಿಯಾರ್, ವೇನೂರ್ ಮುಹಮ್ಮದ್ ಮುಸ್ಲಿಯಾರ್, ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ,ಕೋಶಾಧಿಕಾರಿ ಅಜೀಜ್ ಸುಳ್ಯ ರಾಷ್ಟ್ರೀಯ ಸಮಿತಿಯ ಇತರ ನಾಯಕರು ಹಾಗೂ ಕೆ.ಸಿ.ಎಫ್ ನ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹೈದರ್ ಸಅದಿ ನೂಜಿ ಕಾರ್ಯಕ್ರಮ ನಿರ್ವಹಿಸಿ, ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!