ಶಾರ್ಜಾ: ಬಾಲ್ಕನಿಯಿಂದ ಮಕ್ಕಳು ಬೀಳದಂತೆ ಜಾಗೃತಿ

ಶಾರ್ಜಾ: ಬೃಹತ್ ಮತ್ತು ಸಣ್ಣ ಕಟ್ಟಡಗಳಿಂದ ಮಕ್ಕಳು ಬಿದ್ದು ಮೃತರಾಗುವ ಕೃತ್ಯಗಳು ಅಧಿಕವಾಗುತ್ತಿದ್ದು, ಅದರ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಲ್ಲಿನ ನಗರ ಸಭೆಯು ಮುಂದಾಗಿದೆ.

ಮಕ್ಕಳ ಮರಣಕ್ಕೆ ಕಾರಣವಾಗ ಬಲ್ಲ ಕಟ್ಟಡಗಳ ಸುರಕ್ಷತೆಯ ಬಗ್ಗೆ ಪರಿಶೋಧನೆ ನಡೆಸಿ, ನಗರ ಸಭಾ ಅಧಿಕಾರಿಗಳು ಉಪಾಯ ಸೂಚಿಸಲಿದ್ದಾರೆ.
ಅದಕ್ಕಾಗಿ ಶಾರ್ಜಾದ ಹಳೆಕಟ್ಟಡಗಳಲ್ಲಿ ವಾಸಿಸುವವರು, ಮಾಲಕರನ್ನು ನಗರ ಸಭೆಯ ಸಂವಾದಕ್ಕೆ ಆಹ್ವಾನಿಸಿದೆ. ಕಟ್ಟಡ ಸುರಕ್ಷತಾ ಕ್ಯಾಂಪೇನ್ ನ ಭಾಗವಾಗಿ ಈ ನಡೆ ಎನ್ನಲಾಗಿದೆ.

ಕಳೆದ ವರ್ಷ ಹಲವಾರು ಮಕ್ಕಳು ಈ ರೀತಿಯಾಗಿ ಕಟ್ಟಡಗಳಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು. ಕಟ್ಟಡಗಳ ಬಾಲ್ಕನಿಗಳ ನಿರ್ಮಾನದಲ್ಲಿನ ತೊಡರಿನಿಂದಾಗಿ ಇಂತಹ ದುರಂತಗಳು ನಡೆಯುತ್ತಿದೆ ಎನ್ನುವುದು ಅಧಿಕಾರಿಗಳ ನಿಗಮನವಾಗಿದೆ. ದುರಂತಗಳನ್ನು ತಡೆಯುವ ಭಾಗವಾಗಿ ಹಲವು ಕಟ್ಟಡಗಳಿಗೆ ಸುರಕ್ಷಾ ಕವಚಗಳನ್ನು ಅಳವಡಿಸಲಾಗಿತ್ತು.

ಹಳೆಯ ಕಟ್ಟಡಗಳ ಬಾಲ್ಕನಿ ಮತ್ತು ಕಿಟಕಿಗಳ ಸುರಕ್ಷೆಯನ್ನು ನಿಜಪಡಿಸಲು ಹೆಚ್ಚಿನ ಗಮನ ಹರಿಸಲಾಗುವುದು ಎಂದು ನಗರಸಭಾ ಡಯರಕ್ಟರ್ ಶಾಬಿತ್ ಸಲೀಂ ತಿಳಿಸಿದ್ದಾರೆ. ಮಕ್ಕಳು ಪ್ರವೇಶಿಸಲು ಸಾಧ್ಯವಾಗದ ರೀತಿಯಲ್ಲಿ 120 ಸೆ.ಮೀ ಎತ್ತರದಲ್ಲಿ ಕಿಟಕಿಗಳನ್ನು ಸ್ಥಾಪಿಸಬೇಕು ಎಂದು ಅವರು ಆದೇಶ ನೀಡಿದ್ದಾರೆ. ಅದರ ಬಗ್ಗೆ ಜಾಗೃತಿ ಮೂಡಿಸಲು ಕಿರುಹೊತ್ತಿಗೆಗಳನ್ನು ಪ್ರಕಟಿಸಲಾಗುವುದು ಎಂದು ನಗರಸಭೆ ತೀರ್ಮಾನ ಕೈಗೊಂಡಿದೆ.

Leave a Reply

Your email address will not be published. Required fields are marked *

error: Content is protected !!