ಕರಾವಳಿ ಕೋಮು ಸಂಘರ್ಷ: ಹಲವು ಸಂಘಟನೆಗಳು ಭಾಗಿ- ಗೃಹ ಸಚಿವ

ಶಿವಮೊಗ್ಗ,ಜ.14:-ಕೋಮು ಸಂಘರ್ಷದಂತಹ ಘಟನೆಗಳು ಕರಾವಳಿ ಭಾಗದಲ್ಲಿ ಮಾತ್ರವೇ  ಹೆಚ್ಚಾಗಿ ನಡೆಯುತ್ತಿದ್ದು, ಇದಕ್ಕೆ ಒಂದೇ ಕೋಮಿನ ಸಂಘಟನೆಯೇ  ಕಾರಣವೆಂದು ಹೇಳಲಾಗದು. ಹಲವು ಸಂಘಟನೆಗಳು ಇದರಲ್ಲಿ ಭಾಗಿಯಾಗಿರುತ್ತವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಇಂದು ಇಲ್ಲಿ ತಿಳಿಸಿದರು.

ಕರಾವಳಿ ಭಾಗದಲ್ಲಿ ನಡೆಯುವ ಘಟನೆಗಳಿಗೆ ಆರ್‌ಎಸ್ಎಸ್, ಭಜರಂಗದಳ, ಶ್ರೀ ರಾಮಸೇನಾ, ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಕೂಡ ಭಾಗಿಯಾಗಿರಬಹುದು ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಕರಾವಳಿಯಲ್ಲಿ ನಡೆಯುವ ಘಟನೆಗಳನ್ನು ಪಕ್ಷವೊಂದು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ಚುನಾವಣಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅನಗತ್ಯವಾಗಿ ಘಟನೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಪಕ್ಷದ ಹೆಸರು ಹೇಳದೆ ಟೀಕಿಸಿದರು.

ಸಂಘಟನೆಗಳನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ಇಂಥಹ ಕ್ರಮ ಕೈಗೊಳ್ಳಬಹುದಷ್ಟೇ. ರಾಜ್ಯ ಸರ್ಕಾರವು ಕೇವಲ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರವಷ್ಟೇ ಹೊಂದಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!