ದಯವಿಟ್ಟು ಕಿರುಕುಳ ನೀಡಬೇಡಿ: ಬಿ.ಎಚ್‌.ಲೋಯ ಪುತ್ರ ಅನುಜ್ ಮನವಿ

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಯಾಗಿದ್ದ,ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್‌. ಲೋಯ ಅವರ ಸಾವಿನ ಬಗ್ಗೆ ಅನುಮಾನವಿಲ್ಲ ಎಂದು ಅವರ ಪುತ್ರ ಅನುಜ್ ಲೋಯ ಹೇಳಿದ್ದಾರೆ.

2014ರ ಡಿಸೆಂಬರ್‌ನಲ್ಲಿ ಲೋಯ ಮೃತಪಟ್ಟಿದ್ದರು. ಇವರು ರಾಜಕೀಯ ಮಹತ್ವದ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈ ಪ್ರಕರಣದ ಆರೋಪಿಯಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಪ್ರತಿಭಟನೆ ದಾಖಲಿಸಿ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಬಿ.ಎಚ್‌. ಲೋಯ ಸಾವಿನ ವಿಷಯ ಮುನ್ನೆಲೆಗೆ ಬಂದಿತ್ತು.

ಲೋಯ ಸಾವಿಗೆ ಸಂಬಂಧಿಸಿ ಅವರ ಕುಟುಂಬದವರು ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದು, ‘ದಯವಿಟ್ಟು ಪ್ರಕರಣಕ್ಕೆ ಸಂಬಂಧಿಸಿ ನಮಗೆ ಕಿರುಕುಳ ನೀಡಬೇಡಿ’ ಎಂದು ಮಾಧ್ಯಮಗಳು, ವಕೀಲರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಇತರರ ಬಳಿ ಮನವಿ ಮಾಡಿದ್ದಾರೆ.

‘ಲೋಯ ಸಾವಿನ ನಂತರ ಕುಟುಂಬ ಆಘಾತಕ್ಕೊಳಗಾಗಿದೆ. ಸಾವಿನ ಬಗ್ಗೆ ಯಾವುದೇ ತನಿಖೆಯಾಗಬೇಕು ಎಂದು ನಾವು ಬಯಸುತ್ತಿಲ್ಲ. ಅವರ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ’ ಎಂದು ಅವರ ಪುತ್ರ ಅನುಜ್ ಹೇಳಿದ್ದಾರೆ.

ಘಟನೆಯಿಂದ ಲೋಯ ಕುಟುಂಬ ತುಂಬಾ ಆಘಾತಕ್ಕೊಳಗಾಗಿದೆ. ಪ್ರಕರಣವನ್ನು ರಾಜಕೀಯಗೊಳಿಸಬೇಡಿ ಎಂದು ಲೋಯ ಕುಟುಂದಬ ಪರ ವಕೀಲ ಅಮೀತ್ ನಾಯಕ್ ಮಾಧ್ಯಮಗಳನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!