janadhvani

Kannada Online News Paper

ಕರುನಾಡ ಕಣ್ಮನಿ ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ರವರಿಗೆ ಡಾಕ್ಟರೇಟ್

ಹೌದು!
ಸುಮಾರು ವಷ೯ಗಳ ಹಿಂದೆ ನಾನು ಕಿರಿಯ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡುತ್ತಿರುವಾಗ ನನ್ನ ಊರಾದ ಅಸೈಗೋಳಿಯಲ್ಲಿ ನಾನು ವ್ಯಾಸಂಗ ಮಾಡುತ್ತಿದ್ದ ಶಾಲಾ ಮೈದಾನದಲ್ಲಿ ಸ್ವಾತಂತ್ರ್ಯ ದಿನದ ಸಂಧರ್ಭದಲ್ಲಿ ಸಾರ್ವಜನಿಕವಾಗಿ ಸಿದ್ದಪಡಿಸಿದ ವೇದಿಕೆಯಲ್ಲಿ ಸಾವಿರಾರು ಜನರನ್ನು ಶಾಕ್ಷಿ ನಿಲ್ಲಿಸಿ “ ನಾವು ಸ್ವತಂತ್ರರು ಆದರೆ ಅತಂತ್ರರು”* ಎನ್ನುವ ವಿಷಯದಲ್ಲಿ ಮಾಡಿದ ಭಾಷಣ ನನ್ನ ಸ್ಮೃತಿ ಪಟಲದಲ್ಲಿ ಇಂದಿಗೂ ಶಬ್ದಿಸುತ್ತಾ ಇವೆ ಎಂದು ಹೇಳಿದರು ತಪ್ಪಾಗಲಾರದ್ದು…
ಕಾರಣ ಅವರು ಭಾಷಣದಲ್ಲಿ ಉಚ್ಚರಿಸುವ ಪ್ರತಿಯೊಂದು ಹಚ್ಚ ಕನ್ನಡ ಶಬ್ದವು ಅರಬ್ಬಿ ಸಮುದ್ರದ ಅಲೆಗಳನ್ನು ನಾಚ್ಚಿಸುವಂತೆ ಜನರ ಹೃದಯಕ್ಕೆ ನೇರವಾಗಿ ಬಡಿಯಿತ್ತಿತ್ತು. ಬಹಳ ಸುಂದರವಾಗಿ ದೇಶದ ಇತಿಹಾಸದ ಪುಟಗಳ ಚರಿತ್ರೆಯನ್ನು ತೆರೆಯುತ್ತಿದ್ದರು… ಕನ್ನಡ,ಮಲಯಾಳಂ ಹಾಗು ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಮತ್ತು ಸಂಸ್ಕೃತ ಶ್ಲೋಕಗಳನ್ನು ಸಂಧರ್ಭಕ್ಕೆ ಅನುಸಾರವಾಗಿ ಹೇಳಬಲ್ಲ ಅಧ್ಬುತ ವಾಗ್ಮಿ ಝೈನಿ ಉಸ್ತಾದ್ ರವರು. ತಾನು ಒವ೯ ಮುಸ್ಲಿಂ ಧಾರ್ಮಿಕ ಪಂಡಿತರಾಗಿ ಮಸೀದಿಗಳಿಗೆ ಮಾತ್ರ ಸೀಮಿತವಾಗದೆ ಸಾರ್ವಜನಿಕ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ *ಶೈಖುನಾ ಸುಲ್ತಾನುಲ್ ಉಲಮಾ AP ಉಸ್ತಾದರ* ಕನಸನ್ನು ನನಸು ಗೊಳಿಸಿದ್ದಾರೆ
ಕರುನಾಡ ಕಣ್ಮನಿ ಡಾ|| ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಕಕ್ಕಿಂಜೆ.
ತಾವು ಮಂಡಿಸಿದ ಮಹಾ ಪ್ರಬಂಧಕ್ಕೆ *ಒಪನ್ ಇಂಟರ್ನ್ಯಾಷನಲ್ ಯುನಿವಸಿ೯ಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿ ಎಚ್ ಡಿ) ಪದವಿ ನೀಡಿರುವುದು. ಅತ್ಯಂತ ಸಂತೋಷ ತಂದಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪದವಿಗಳು ಲಭಿಸಲಿ ಎಂದು ಶುಭ ಹಾರೈಸುತ್ತೇನೆ. ಅಭಿನಂದನೆಗಳು  ನನ್ನ ಸುನ್ನೀ ಸಂಘದ ಅಭಿಮಾನ ಯುವ ವಿದ್ವಾಂಸರಾದ  ಝೈನಿ ಉಸ್ತಾದರಿಗೆ

✍🏻 ಕಲಂದರ್ ಶಾಫೀ ಅಸೈಗೋಳಿ
(KCF ಮಕ್ಕತುಲ್ ಮುಕರ್ರಮಃ)

error: Content is protected !! Not allowed copy content from janadhvani.com