janadhvani

Kannada Online News Paper

ಮಿಸ್ಬಾಹುಲ್ ಹುದಾ ಶಿಷ್ಯ ಸಂಘಟನೆ ಅಸ್ತಿತ್ವಕ್ಕೆ

ದರ್ಸ್ ರಂಗದಲ್ಲಿ ಎರಡುವರೆ ದಶಕಗಳನ್ನು ದಾಟಿ ದೀನೀ ಚೌಕಟ್ಟಿನಲ್ಲಿರುವ ಸಮುದಾಯವನ್ನು ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಬಂಬ್ರಾಣ, ಕಾಸರಗೋಡು ಬೆದಿರೆ, ಮಚ್ಚಂಪಾಡಿ, ಬಾಯಾರ್, ಆನೆಕಲ್ಲು, ಸಾಂಬರ್ ತೋಟ, ಕೂರತ್, ಮಂಜೇಶ್ವರ ಪಾಂಡ್ಯಲ್, ಪ್ರಸ್ತುತ ಸೋಮೇಶ್ವರ ಉಚ್ಚಿಲದಲ್ಲಿ ಸೇವೆ ಸಲ್ಲಿಸುತ್ತಿರುವ ಶೈಖುನಾ ಇ.ಕೆ ಹಸನ್ ಮುಸ್ಲಿಯಾರ್, ಶೈಖುನಾ ಅಸ್ಗರ್ ಮುಸ್ಲಿಯಾರ್ ಮಲಪ್ಪುರಂ, ಶೈಖುನಾ ತಾಜುಶ್ಶರಿಯ ಅಲಿಕುಂಞಿ ಉಸ್ತಾದರ ಶಿಷ್ಯರಾದ ಬಹು ಉದ್ಯಾವರ ಅಲ್-ಹಾಜ್ ಎಂ.ಪಿ ಇಬ್ರಾಹಿಮುಲ್ ಫೈಝಿ ಉಸ್ತಾದರ ಮಿಸ್ಬಾಹುಲ್ ಹುದಾ ದರ್ಸಿನ ಹಳೆ ವಿಧ್ಯಾರ್ಥಿ ಸಮಾವೇಶ 10/11/2018 ಶನಿವಾರ ಮಧ್ಯಾಹ್ನ ಲುಹರ್ ನಮಾಝಿನ ಬಳಿಕ 407 ಜುಮಾ ಮಸ್ಜಿದ್ ಸೋಮೇಶ್ವರ ಉಚ್ಚಿಲದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉಸ್ತಾದರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಸಿ.ಟಿ.ಎಂ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ಕೆ.ಸಿ ರೋಡ್ ದುಆಃ ನೆರವೇರಿಸಿ ಉಧ್ಘಾಟಿಸಿದರು. ಜಮಾಲುದ್ದೀನ್ ಸಖಾಫಿ ಆದೂರು ಪ್ರಾಸ್ತಾವಿಕ ಭಾಷಣ ಮಾಡಿ ಉಸ್ತಾದರ ಖಿತಾಬ್ ವಿಷಯದಲ್ಲಿ ಆಳವಾದ ಜ್ಞಾನದ ಬಗ್ಗೆ ವಿವರಿಸಿ ಅದಕ್ಕಿಂತ ಮಿಗಿಲಾಗಿ ಉಸ್ತಾದರ ವಿನಯ, ಸೂಕ್ಷ್ಮತೆ ವಿಷಯದಲ್ಲಿ ಶಿಷ್ಯಂದಿರಾದ ನಮಗೆ ಕಲಿಯಲು ಬಹಳಷ್ಟು ಕಾರ್ಯಗಳು ಇದೆ ಎಂದು ಹೇಳಿ ನೆನಪಿಸಿದರು.

ಈ ವೇಳೆ ಉಸ್ತಾದರು ಅಧ್ಯಕ್ಷತೆ ವಹಿಸಿ ಮಾತನಾಡಿ ನನ್ನ ಸಹಪಾಠಿಗಳಾದ ಉಸ್ತಾದರ ಶಿಷ್ಯಯಂದಿರ ಸಂಘಟನೆಗಳು ಹಲವು ವರ್ಷಗಳ ಹಿಂದೆಯೇ ಕಾರ್ಯಚರಿಸುತ್ತಿದ್ದು, ನನ್ನ ಬಳಿಯೂ ಕೆಲವು ಶಿಷ್ಯರು ಈ ಬಗ್ಗೆ ವಿನಂತಿಸಿದಾಗ ನಾನು ಅದರ ಬಗ್ಗೆ ತಲೆ ಕೆಡಿಸಲಿಲ್ಲ ನಾನು ಅದಕ್ಕೆ ಅರ್ಹನು ಅಲ್ಲ ಎಂದು ಹೇಳುತಿದ್ದೆ, ಇದೀಗ ನನ್ನ ಗಮನಕ್ಕೆ ತರದೆ ಕೆಲವು ಶಿಷ್ಯರು ಹಳೆಯ ವಿದ್ಯಾರ್ಥಿಗಳನ್ನು ಸಂಘಟಿಸಿ ನನ್ನ ಬಳಿ ತಿಳಿಸಿದಾಗ ನಾನು ಮರಣ ಹೊಂದಿದಾಗ ಕುರ್ಆನ್, ತಹ್ಲೀಲ್ ಹೇಳಲು ಒಂದು ಸಮೂಹ ಇರಬೇಕು ಎಂಬ ನಿಟ್ಟಿನಲ್ಲಿ ಸಮ್ಮತಿ ಕೊಟ್ಟೆ.

ಗುರು-ಶಿಷ್ಯ ಪರಂಪರೆ ಎಂಬುದು ಬಹಳ ಮಹತ್ತರವಾದ ಕಾರ್ಯ.ನಮಗೆ ದೊಡ್ಡ ಸನದ್ ಉಸ್ತಾದರ ಆಶೀರ್ವಾದವಾಗಿದೆ ಎಂದು, ಉಸ್ತಾದರಿಗೆ ಕಲಿಸಿದ ಉಸ್ತಾದರುಗಳನ್ನು ಸ್ಮರಿಸಿ, ಸಂಘಟನೆ ಇನ್ನಷ್ಟು ಉತ್ತಮ ಕಾರ್ಯಚರಣೆಯೊಂದಿಗೆ ಮುನ್ನಡೆಯಲು ಉಪಯುಕ್ತ ಮಾಹಿತಿಗಳನ್ನು ನೀಡಿ ಶುಭ ಹಾರೈಸಿದರು

ಮುಂದೆ ನೂತನ ಸಮಿತಿಗೆ ರೂಪುಗೊಡಲಾಯಿತು. ಪಧಾದಿಕಾರಿಗಳ ವಿವರ ಈ ಕೆಳಗಿನಂತಿವೆ.
ಸಂಘಟನೆಯ ಗೌರವಾಧ್ಯಕ್ಷರಾಗಿ ಉಸ್ತಾದ್ ಇಬ್ರಾಹಿಮುಲ್ ಫೈಝಿ ಉದ್ಯಾವರ, ಅಧ್ಯಕ್ಷರಾಗಿ ಸಯ್ಯಿದ್ ಮುಹಮ್ಮದ್ ಸಲೀಮ್ ಅಸ್ಸಖಾಫ್ ತಂಙಳ್ ಕೆ.ಸಿ ರೋಡ್, ಉಪಾಧ್ಯಕ್ಷರುಗಳಾಗಿ ಜಬ್ಬಾರ್ ಲತೀಫೀ ಪಾವೂರು, ಜಾಫರ್ ಸಖಾಫಿ ಮುಡಿಮಾರ್, ಫಾರೂಕ್ ಮುನ್ನಿಪ್ಪಾಡಿ. ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಸಖಾಫಿ ಆದೂರು, ವರ್ಕಿಂಗ್ ಕಾರ್ಯದರ್ಶಿಯಾಗಿ ಹುಸೈನ್ ಸಖಾಫಿ ಮುಡಿಪು, ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಲಿ ಸಖಾಫಿ ಮಂಜನಾಡಿ, ಹಾಶಿರ್ ಸಖಾಫಿ ಗುವೆದಪಡ್ಪು, ಕೋಶಾಧಿಕಾರಿ ಖಲೀಲ್ ಬಾಳಿಯೂರ್ ಸಂಘಟನೆ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ(ಮಕ್ಕಾ), ಸಂಘಟನೆ ವೈಸ್ ಕಾರ್ಯದರ್ಶಿ ಕಲಂದರ್ ಕನ್ಯಾನ(ಶಾರ್ಜಾ)
ಕಾರ್ಯಕಾರಿ ಸದಸ್ಯರಾಗಿ ಅಬ್ದುಲ್ಲಾ ಮದನಿ ಅಟ್ಟಗೋಳಿ, ಸ್ವಾಲಿಹ್ ಹನೀಫಿ ಜಾಲ್ಸೂರು, ಅಲಿ ಝುಹ್ರಿ ಆನೆಕಲ್ಲು, ಮುಹಮ್ಮದ್ ಶಾಕಿರ್ ಮುಡಿಪ್ಪು, ನಾಸಿರ್ ಮದನಿ ಸಾಂಬಾರ್ ತೋಟ, ಮುಹಮ್ಮದ್ ಶರೀಫ್ ಮುಸ್ಲಿಯಾರ್ ಪೈಂಬೆಚ್ಚಾಲ್, ಸೈಫುದ್ದೀನ್ ಅಶ್ರಫಿ ಸುಳ್ಯ, ಅಹ್ಮದ್ ಕಬೀರ್ ಆನೆಕಲ್ಲು, ನೂರುದ್ದೀನ್ ಆನೆಕಲ್ಲು, ಮುಹಮ್ಮದ್ ಖಾಸಿಮ್ ತೌಡುಗೋಳಿ, ಹನೀಫ್ ಮುಸ್ಲಿಯಾರ್ ಕುಕ್ಕಾಜೆ, ಪಬ್ಲಿಶಿಂಗ್ ಎಕ್ಸಿಕುಟಿವ್ ಅಲಿ ಸಖಾಫಿ & ಸೈಫುದ್ದೀನ್ ಅಶ್ರಫಿಯನ್ನು ನೇಮಿಸಲಾಯಿತು.

ಕಾರ್ಯಕ್ರಮವನ್ನು ಹುಸೈನ್ ಸಖಾಫಿ ಮುಡಿಪು ಸ್ವಾಗತಸಿ, ಮುಹಮ್ಮದ್ ಅಲಿ ಸಖಾಫಿ ಮಂಜನಾಡಿ ವಂದಿಸಿದರು.

error: Content is protected !! Not allowed copy content from janadhvani.com