ಹೊರಟ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ಪತನ-4 ಮೃತದೇಹಗಳು ಪತ್ತೆ

ಮುಂಬೈ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಐವರು ಉದ್ಯೋಗಿಗಳು ಮತ್ತು ಇಬ್ಬರು ಪೈಲಟ್‌ಗಳನ್ನೊಳಗೊಂಡ ಪವನ್ ಹನ್ಸ್ ಹೆಲಿಕಾಪ್ಟರ್ ಇಲ್ಲಿನ ಜುಹು ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ.

ಇದುವರೆಗೆ ನಾಲ್ಕು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಒಂದು ಮೃತದೇಹ ಒಎನ್‌ಜಿಸಿ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್ ಗಾರ್ಗ್ ಅವರದ್ದು ಎಂದು ಗುರುತಿಸಲಾಗಿದೆ. ಇತರ ಮೂವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಕ್ಯಾಪ್ಟನ್‌ಗಳಾದ ವಿ.ಸಿ. ಕಟೋಚ್, ರಮೇಶ್ ಓತ್‌ಕಾರ್, ಒಎನ್‌ಜಿಸಿ ಉಪ ಪ್ರಧಾನ ವ್ಯವಸ್ಥಾಪಕರಾದ ಪಂಕಜ್ ಗಾರ್ಗ್, ಸರ್ವಣ್ಣನ್, ವಿ.ಕೆ. ಬಾಬು, ಜೋಸ್ ಅಂತೋನಿ ಮತ್ತು ಪಿ. ಶ್ರೀನಿವಾಸನ್ ಹೆಲಿಕಾಪ್ಟರ್‌ನಲ್ಲಿದ್ದರು.

ಬೆಳಿಗ್ಗೆ 10.20ಕ್ಕೆ ಹೊರಟ ಹೆಲಿಕಾಪ್ಟರ್ 10.58ಕ್ಕೆ ಒಎನ್‌ಜಿಸಿಯ ನಾರ್ತ್‌ ಫೀಲ್ಡ್‌ನಲ್ಲಿ ಇಳಿಯಬೇಕಿತ್ತು. ಆದರೆ, 10.35ರ ವೇಳೆಗೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಸಂಪರ್ಕ ಕಡಿದುಕೊಂಡಿದೆ. ಪತನದ ವೇಳೆ ಹೆಲಿಕಾಪ್ಟರ್ ಮುಂಬೈನಿಂದ 30 ನಾಟಿಕಲ್ ಮೈಲಿ ದೂರದಲ್ಲಿ ಸಂಚರಿಸುತ್ತಿತ್ತು.

Leave a Reply

Your email address will not be published. Required fields are marked *

error: Content is protected !!