ವಿರಾಜಪೇಟೆ: ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಕೇಂದ್ರ ಅನ್ವಾರುಲ್ ಹುದಾದಲ್ಲಿ ವಿದ್ಯಾರ್ಜನೆಗೈದು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿಶ್ವ ವಿಖ್ಯಾತ ವಿದ್ಯಾಲಯಗಳಿಗೆ ತೆರಳಿದ ವಿದ್ಯಾರ್ಥಿಗಳ ಸಂಗಮ ಅಲುಮ್ನಿ ಮೀಟ್ ಅನ್ವಾರ್ ಕ್ಯಾಂಪಸ್ನಲ್ಲಿ ನಡೆಯಿತು.ಸಂಸ್ಥೆಯ ಸಾರಥಿ ಶೈಖುನಾ ಅಹ್ಸನಿ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರಾದ ಅಬ್ದುಲ್ ರಶೀದ್ ಸಅದಿ, ಮುದರ್ರಿಸರಾದ ಇಸ್ಮಾಯಿಲ್ ಸಖಾಫಿ, ಶಫೀಖ್ ಸಖಾಫಿ, ಅಬ್ದುಲ್ ರಹ್ಮಾನ್ ಅಹ್ಸನಿ, ಯಾಕೂಬ್ ಮಾಸ್ಟರ್, ಶಕೀರ್ ಮಾಸ್ಟರ್, ಇಬ್ರಾಹಿಂ ಮಾಸ್ಟರ್ ಉಪಸ್ಥಿತರಿದ್ದರು. ಇಸ್ಮಾಯಿಲ್ ಕಡಂಗ ಸ್ವಾಗತಿಸಿ ರಿಯಾಸ್ ಸಅದಿ ವಂದಿಸಿದರು.
