janadhvani

Kannada Online News Paper

ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇಂಡಿಯಾ- ಅರ್ಧವಾರ್ಷಿಕ ಪರೀಕ್ಷೆ ಆರಂಭ

ವಿಟ್ಲ : ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್‌ ಇಂಡಿಯಾ ಇದರ ಅಂಗೀಕಾರದೊಂದಿಗೆ ದೇಶ-ವಿದೇಶಗಳಲ್ಲಿ ಕಾರ್ಯಾಚರಿಸುವ ಸುಮಾರು 9 ಸಾವಿರಕ್ಕಿಂತಲೂ ಅಧಿಕ ಮದ್ರಸಗಳಲ್ಲಿ 2018ನೇ ಸಾಲಿನ ಅರ್ಧವಾರ್ಷಿಕ ಪರೀಕ್ಷೆಯು-ಅಕ್ಟೋಬರ್ 30ರಂದು ಆರಂಭಗೊಳ್ಳಲಿದ್ದು, ನವಂಬರ್ 5 ರಂದು ಕೊನೆಗೊಳ್ಳಲಿದೆ.

ಅದರ ಯಶಸ್ವಿ ನಿರ್ವಹಣೆಗಾಗಿ ರೇಂಜ್,ಜಿಲ್ಲಾ, ರಾಜ್ಯ ಮತ್ತು ಕೇಂದ್ರ ಘಟಕಗಳ ಪರೀಕ್ಷಾ ವಿಭಾಗವು ಸಕ್ರಿಯವಾದ ಕಾರ್ಯಾಚರಣೆಗಳ ಮೂಲಕ ಪ್ರತೀ ಪರೀಕ್ಷಾ ಸೆಂಟರ್ ಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಿದ್ದು, ಒಂದನೇ ತರಗತಿಯಿಂದ ಮೊದಲ್ಗೊಂಡು ಪ್ಲಸ್ ಟೂ ವರೆಗಿನ ಎಲ್ಲಾ ಕ್ಲಾಸ್ ಗಳಿಗೆ ಪರೀಕ್ಷೆ ನಡೆಯಲಿದೆ.
ಕುರ್ಆನ್,ಫಿಕ್ಹ್,ಅಖಾಇದ್, ಅಖ್ಲಾಖ್,ತಝ್’ಕಿಯ್ಯ, ತಾರೀಖ್, ತಜ್’ವೀದ್, ತಪ್ಸೀರ್, ಮಆಲಿಮುತ್ತುಲ್ಲಾಬ್, ದುರೂಸ್,ತಫ್ಹೀಂ, ಕಿತಾಬತ್ ಮುಂತಾದ ಅನೇಕ ವಿಷಯಗಳಲ್ಲಿ ನಡೆಯುವ ಪರೀಕ್ಷೆಯು ಪ್ರತಿದಿನ ಬೆಳಿಗ್ಗೆ 7ಕ್ಕೆ ಆರಂಭಗೊಂಡು 9ಕ್ಕೆ ಕೊನೆಗೊಳ್ಳಲಿದೆ.
ಇದರ ಸುಸೂತ್ರವಾದ ನಿರ್ವಹಣೆಗಾಗಿ ಪ್ರತಿ ರೇಂಜ್ ಸಮಿತಿಯು ಪ್ರತ್ಯೇಕವಾದ ಸ್ಕೋಡ್ ರಚಿಸಿ ಸಕ್ರಿಯವಾಗಿ ಕಾರ್ಯಾಚರಣೆಗಿಳಿದಿದ್ದು, ಪ್ರಸ್ತುತ ತಂಡವು ಆಯಾ ರೇಂಜ್ ವ್ಯಾಪ್ತಿಯಲ್ಲಿರುವ ಮದ್ರಸಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಲಿದೆ. ಆದುದರಿಂದ ಮೊಹಲ್ಲಾ ಸಮಿತಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಕೇಂದ್ರ ಪರೀಕ್ಷಾ ವಿಭಾಗವು ವಿನಂತಿಸಿದೆ.

✍🏻mkm ಕಾಮಿಲ್ ಸಖಾಫಿ ಕೊಡಂಗಾಯಿ

error: Content is protected !! Not allowed copy content from janadhvani.com