janadhvani

Kannada Online News Paper

SSF ನೆಲ್ಯಾಡಿ ಯುನಿಟ್ ಸಮ್ಮೇಳನ

ನೆಲ್ಯಾಡಿ: ಯುವ ಜನತೆಯು ಅಕ್ರಮ ಅನಾಚಾರ, ಗಾಂಜ ಮದ್ಯ ವ್ಯಸನಿಯಂತ ದುಷ್ಚಟಗಳಿಂದ ತುಂಬಿದ ಪ್ರಸಕ್ತ ಸನ್ನಿವೇಶದಲ್ಲಿ “ಯೌವ್ವನ ಮರೆಯಾಗುವ ಮುನ್ನ” ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಪ್ರತೀ ಶಾಖಾ ಮಟ್ಟದಲ್ಲಿ ಹಮ್ಮಿಕೊಂಡಿರುವ ಯುನಿಟ್ ಸಮ್ಮೇಳನವು ಅಕ್ಟೋಬರ್ 23 ಮಂಗಳವಾರ ನೆಲ್ಯಾಡಿ ಸುನ್ನೀ ಸೆಂಟರ್ ಸಂಭಾಂಗಣದಲ್ಲಿ ನಡೆಯಿತು.

ಕೇಂದ್ರ ಜುಮಾ ಮಸೀದಿ ಖತೀಬರಾದ ಬಹು| ಅಲ್ಹಾಜ್ ಅಬೂಹನ್ನತ್ ಮುಹಮ್ಮದ್ ಸಖಾಫಿಯವರು ಕಾರ್ಯಕ್ರಮನನ್ನು ದುಆಃ ಮೂಲಕ ಉಧ್ಘಾಟಿಸಿ ಮಾತನಾಡಿದರು.

SSF ಉಪ್ಪಿನಂಗಡಿ ಡಿವಿಶನ್ ನಾಯಕರಾದ ಬಹು| ಎಫ್.ಹೆಚ್ ಮುಹಮ್ಮದ್ ಮಿಸ್ಬಾಹಿ ಯವರು “ಯೌವನ ಮರೆಯಾಗುವ ಮುನ್ನ” ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸ್ಥಳೀಯ ಶಾಖಾ ಅಧ್ಯಕ್ಷ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಹು ಬಹು ಶರೀಫ್ ಸಖಾಫಿ, ಪ್ರಿನ್ಸಿಪಾಲ್ ಅಲ್ ಬದ್ರಿಯಾ ಶರೀಅತ್ ಕಾಲೇಜು ನೆಲ್ಯಾಡಿ. ರಫೀಕ್ ಸಖಾಫಿ ಆತೂರು, ಎನ್.ಎಸ್ ಸುಲೈಮಾನ್ ಅಧ್ಯಕ್ಷರು sys ನೆಲ್ಯಾಡಿ. ಉಮ್ಮರ್ ತಾಜ್
ಉಪಾಧ್ಯಕ್ಷರು sma ಉಪ್ಪಿನಂಗಡಿ ರೀಜನಲ್. ಮುಸ್ತಫಾ ಪಟ್ಟೆ, ಪ್ರ ಕಾರ್ಯದರ್ಶಿ ನೆಲ್ಯಾಡಿ ಸೆಕ್ಟರ್, ಕೆಸಿಎಫ್ ಸದಸ್ಯರುಗಳಾದ ಲತೀಫ್ ಪಡ್ಡಡ್ಕ, ಲತೀಫ್ ಮುದ್ದಿಗೆ, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು

ಇರ್ಶಾದ್ ಕೆ.ಇ ಸ್ವಾಗತಿಸಿ, ಮುಸ್ತಫ ಹಿದಾಯತ್ ನಗರ ವಂದಿಸಿದರು.

ವರದಿ:ರಿಯಾ ನೆಲ್ಯಾಡಿ

error: Content is protected !! Not allowed copy content from janadhvani.com