ಎಸ್ಸೆಸ್ಸೆಪ್ ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರತಿಭೊತ್ಸವ -2018, ಕಡ್ತೂರ್ ನಲ್ಲಿ

ಶಿವಮೊಗ್ಗ :  ಎಸ್ಸೆಸ್ಸೆಪ್ ಕರ್ನಾಟಕ ರಾಜ್ಯ ಸಮಿತಿ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸುತ್ತಿರುವ ಪ್ರತಿಭೋತ್ಸವವು  ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ 2018 ಜನವರಿ 14 ರಂದು ಬದ್ರಿಯಾ ಜುಮಾ ಮಸ್ಜಿದ್ ವಠಾರ ಕಡ್ತೂರ್ ನಲ್ಲಿ ನಡೆಯಲಿದೆ.

ಜೂನಿಯರ್, ಸೀನಿಯರ್, ಜನರಲ್, ದಅ್’ವಾ ಜೂನಿಯರ್, ದಅ್’ವಾ ಸೀನಿಯರ್, ಕ್ಯಾಂಪಸ್ ಜೂನಿಯರ್, ಕ್ಯಾಂಪಸ್ ಸೀನಿಯರ್ ಒಟ್ಟು 7 ವಿಭಾಗದಲ್ಲಿ ಜಿಲ್ಲೆಯ ತೀರ್ಥಹಳ್ಳಿ , ಶಿವಮೊಗ್ಗ , ಭದ್ರಾವತಿ , ಸಾಗರ, ಹೊಸನಗರ ಎಂಬಿ ಡಿವಿಷನ್’ಗಳ ಸುಮಾರು 200ಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, 92 ವಿವಿಧ ಸ್ಪರ್ಧೆಗಳು, ಮೂರು ಪ್ರಮುಖ ವೇದಿಕೆಗಳಲ್ಲಿ ನಡೆಯಲಿದೆ.
ಜನವರಿ 14, ರವಿವಾರ )ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಮಗ್’ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಘಟನಾ ನಾಯಕರು,ಸ್ಥಳೀಯ ರಾಜಕೀಯ ಮುಖಂಡರು, ಸಾಮಾಜಿಕ, ಇನ್ನಿತರ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಂದು ಎಸ್ಸೆಸ್ಸೆಫ್ ಜಿಲ್ಲಾ ಪ್ರತಿಭೋತ್ಸವ ಸಮಿತಿ ಸದಸ್ಯರಾದ ಡಿಎಂ ಅಬೂಬಕ್ಕರ್ ಮದನಿ ಕಡ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!