ಪಾಸ್ಪೋರ್ಟ್’ನ್ನು ಇನ್ನುಮುಂದೆ ಅಧಿಕೃತ ಗುರುತಿನ ದಾಖಲೆಯಾಗಿ ಬಳಸುವಂತಿಲ್ಲ

ನವದೆಹಲಿ: ಕೇಂದ್ರ ಸರ್ಕಾರ ಪಾಸ್ ಪೋರ್ಟ್ ನಲ್ಲಿ ಕೆಲ ಬದಲಾವಣೆ ತರಲು ಮುಂದಾಗಿದ್ದು,ಅದರ ಕೊನೇ ಪುಟದಲ್ಲಿರುವ ವಿಳಾಸವನ್ನು ತೆಗದು ಹಾಕಲು ಚಿಂತನೆ ನಡೆಸುತ್ತಿದೆ.ಈ ನಿಟ್ಟಿನಲ್ಲಿ ಇನ್ನು ಮುಂದೆ ಭಾರತೀಯರು ಅದನ್ನು ಅಧಿಕೃತ ಅಡ್ರೆಸ್ ಪ್ರೂಫ್ ಆಗಿ ಬಳಸಲು ಸಾಧ್ಯವಾಗುವುದಿಲ್ಲ.
ಈ ಸಂಬಂಧ ವಿದೇಶಾಂಗ ಸಚಿವಾಲಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನಾಗರಿಕರ ಮಾಹಿತಿ ರಕ್ಷಣೆಗಾಗಿ ಮುಂದಿನ ಸರಣಿಯ ಪಾಸ್ ಪೋರ್ಟ್ ಗಳ ಕೊನೆ ಪೇಜ್ ನಲ್ಲಿ ವಿಳಾಸ ಮುದ್ರಿಸದಂತೆ ಸೂಚಿಸಲಾಗಿದೆ.ಈಗ ಚಾಲ್ತಿಯಲ್ಲಿರುವ ಎಲ್ಲಾ ಪಾಸ್ ಪೋರ್ಟ್ ಗಳನ್ನು ಅವಧಿ ಮುಗಿಯುವವರೆಗೆ ಬಳಸಬಹುದಾಗಿದೆ.
ಹೊಸ ಪಾಸ್ ಪೋರ್ಟ್ ನಲ್ಲಿ ಬಣ್ಣ ಸಹ ಬದಲಿಸಲಾಗುತ್ತಿದೆ.ಪ್ರಸ್ತುತ, ಸರ್ಕಾರಿ ಅಧಿಕಾರಿಗಳು ಮತ್ತು ಇತರ ರಾಷ್ಟ್ರಗಳಿಗೆ ಸರ್ಕಾರಿ ಉದ್ದೇಶಗಳಿಗಾಗಿ ಭೇಟಿ ನೀಡಲು ಬಯಸುವವರ ಪಾಸ್ಪೋರ್ಟ್ ಬಿಳಿ ಬಣ್ಣ, ಹಾಗೂ ಎಮಿಗ್ರೆಶನ್ ತೆರವು ಅಗತ್ಯ (ECR) ಮತ್ತು ಎಮಿಗ್ರೆಶನ್ ತೆರವು ಅಗತ್ಯವಿಲ್ಲ  (ECNR) ನೀಲಿ ಬಣ್ಣದ್ದಾಗಿದೆ.ಇನ್ನುಮುಂದೆ  ಎಮಿಗ್ರೆಶನ್ ಕ್ಲಿಯೆರೆನ್ಸ್ ಅಗತ್ಯವಿರುವ ಪಾಸ್ಪೋರ್ಟ್ ಓರಂಜ್ ಬಣ್ಣದಲ್ಲಿ ಮೂಡಿ ಬರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!