ಸಲಫಿಸ್ಟ್ ಉಗ್ರವಾದ ವಿರುದ್ದ ಕಠಿಣ ನಿಲುವು ತಾಳಬೇಕಾಗಿದೆ-ಸಯ್ಯಿದ್ ಜಿಫ್ರಿ ತಂಙಳ್

ತಿರೂರಂಗಾಡಿ(ಜನಧ್ವನಿ): ಸಲಫಿಸ್ಟ್ ಆಶಯ ವಿರುದ್ದ ಕಠಿಣ ವಿಮರ್ಶೆಯೊಂದಿಗೆ ಇ.ಕೆ ವಿಭಾಗ ಸುನ್ನಿಗಳು ರಂಗಕ್ಕೆ.ಜಾಗತಿಕ ಮಟ್ಟದಲ್ಲಿ ಸಲಫಿಸ್ಟ್ ಉಗ್ರವಾದ ವಿರುದ್ದ ಕಠಿಣ ನಿಲುವು ತಾಳಬೇಕಾಗಿದೆ ಎಂದು ಇಕೆ ವಿಭಾಗ ಸಮಸ್ತ ಅಧ್ಯಕ್ಷರಾದ ಬಹು:ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು. ಕೂರಿಯಾಡ್ ನಲ್ಲಿ  ಸಲಫಿಸಂ ವಿರುದ್ದ ಆಯೋಜಿಸಲ್ಪಟ್ಟ ‘ಆದರ್ಶ ಕ್ಯಾಂಪೇನ್’ ನ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಜಾಹಿದ್,ಜಮಾಅತೇ ಇಸ್ಲಾಮಿ ಮುಂತಾದ ನೂತನವಾದಿಗಳೊಂದಿಗೆ ಸುನ್ನಿಗಳಿಗಿರುವ ಭಿನ್ನತೆಯು ವಿಶ್ವಾಸ ಕಾರ್ಯದಲ್ಲೇ ಆಗಿದೆ, ಇಸ್ಲಾಮಿನ ಚರಿತ್ರೆಯಲ್ಲಿ ಮೊತ್ತಮೊದಲ ಬಾರಿಗೆ  ಮುಸ್ಲಿಮರನ್ನು ಕಾಫಿರಾಗಿಸಿದ್ದು  ಖವಾರಿಜ್ ಗಳಾಗಿದ್ದರು, ಅದೇ ನಿಲುವನ್ನಾಗಿದೆ ಇಂದು ಮುಜಾಹಿದ್. ಜಮಾಅತೇ ಇಸ್ಲಾಮಿಯವರು ಅನುಗಮಿಸುತ್ತಿರುವುದು ಎಂದರು.

ಧಾರ್ಮಿಕ ಆಚಾರ (ಕರ್ಮ)ಗಳಲ್ಲಿ ಮಾತ್ರವಲ್ಲದೇ ವಿಶ್ವಾಸ ಕಾರ್ಯದಲ್ಲೂ ತಪ್ಪು ಸಂಭವಿಸಿದ ವಿಭಾಗವಾಗಿದೆ ಮುಜಾಹಿದ್ ಮತ್ತು ಜಮಾಅತ್, ಆದ್ದರಿಂದಲೇ ಅವರೊಂದಿಗೆ ಯಾವುದೇ ಸಂಬಂಧವನ್ನು ಬೆಳೆಸಬಾರದೆಂದು ಸಮಸ್ತ ಅವತ್ತೇ ಹೇಳಿರುವುದು, ಅವರ ಆದರ್ಶಕ್ಕೆ ಬೆಂಬಲನೀಡುವಂತಹಾ ಯಾವುದೇ ಸಹಕಾರ ಕೂಡಾ ಸಲ್ಲದು ಎಂಬುದಾಗಿದೆ ಸಮಸ್ತದ ನಿಲುವು,ಇದರಲ್ಲಿ ಯಾವುದೇ ಬದಲಾವಣೆಯಿಲ್ಲ, ಧಾರ್ಮಿಕ ವಿಷಯಗಳಲ್ಲಿ ಸಂವಧಿಸುವ ಹಕ್ಕು ಧಾರ್ಮಿಕ ಪಂಡಿತರಿಗೇ ಹೊರತು ರಾಜಕೀಯ ನೇತಾರರಿಗಲ್ಲ, ಅವರು ರಾಜ್ಯಸಭೆ ಮುಂತಾದ ಕಡೆಗಳಲ್ಲಿ ಭಾಷಣ ಬಿಗಿದರೆ ಸಾಕು ಎಂದ ಸಯ್ಯಿದರು, ನೂತನವಾದಿಗಳನ್ನು ಬೆಂಬಲಿಸುವವರು ಇಸ್ಲಾಮ್ ನ್ನು ನಾಶಮಾಡಲು ಸಹಕರಿಸುವವರಾಗಿದ್ದಾರೆ ಎಂದು ಪ್ರವಾದಿ ಸ.ಅ ಹೇಳಿದ್ದಾರೆ ಎಂದುಹೇಳಿದರು.

ಹಲವಾರು ದಿನಗಳಿಂದ ಕಾರ್ಯಕರ್ತರ ಮನಸ್ಸಲ್ಲಿದ್ದ ನೋವಿನ ಮೋಡಗಳು ಜಿಫ್ರಿ ಮುತ್ತು ಕ್ಕೋಯ ತಂಙಳ್ ರವರ ಸಿಡಿಲಿನೊಂದಿಗಿರುವ ಪ್ರಭಾಷಣ ಮಳೆಯಲ್ಲಿ ಕೊಚ್ಚಿ ಹೋದವು.!

ಕಾರ್ಯಕ್ರಮವನ್ನು ಉದ್ಘಾಟಿಸಿದ ಸೆಯ್ಯದ್ ಹೈದರಾಲಿ ಶಿಹಾಬ್ ತಂಙಳ್, ಸುನ್ನತ್ ಜಮಾತಿನ ನಿಲುವನ್ನು ಗಟ್ಟಿಯಾಗಿಯೇ ಹೇಳಿದರು.ಅವರ ಭಾಷಣ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಇತ್ತು,ಆಶಯ ಸಮ್ರಧ್ಧಿ ಇತ್ತು, ಮನೋಹರವಾಗಿತ್ತು, ಹೇಳಬೇಕಾದುದ್ದೆನ್ನೆಲ್ಲಾ ಹೇಳಿದ್ದರು.
ಅಲಿ ಕುಟ್ಟಿ ಉಸ್ತಾದ್, ಎಂ ಟಿ ಉಸ್ತಾದ್, ಕೋಯ್ಯಾಡ್ ಉಮರ್ ಮುಸ್ಲಿಯಾರ್ ಮುಂತಾದವರು ಹ್ರಸ್ವವಾಗಿ ಸುನ್ನತ್ ಜಮಾಅತ್ತಿನ ಆಶಯವನ್ನೇ ಒತ್ತಿ ಹೇಳಿದರು.

ಅಬ್ದುಲ್ ಹಮೀದ್ ಫೈಝಿ ಅಂಬಕ್ಕಡವ್, ಅಬ್ದುಸ್ಸಮದ್ ಪೂಕೊಟೂರು, ಓಣಂಪಳ್ಳಿ ಮುಹಮ್ಮದ್ ಫೈಝಿ, ಸತ್ತಾರ್ ಪಂದಲ್ಲೂರು, ಮುಸ್ತಫಾ ಅಶ್ರಫೀ ಮುಂತಾದವರ ಪ್ರಭಾಷಣಗಳಲ್ಲಿ ಎಪಿ ವಿಭಾಗ ಸುನ್ನಿಗಳನ್ನು ವಿಮರ್ಶಿಸುವ ಯಾವುದೇ ಮಾತು ಇರಲಿಲ್ಲ.ಎಲ್ಲರೂ ಅಹ್ಲುಸ್ಸುನ್ನದ ಆಶಯಗಳನ್ನೇ ಹೇಳುವುದರೊಂದಿಗೆ ಸಮಸ್ತದ ಪ್ರಾರಂಭಿಕ ನಿಲುವುಗಳನ್ನೇ ಸಮರ್ಥಿಸಿದರು.

ಸಮಸ್ತ ಕೇರಳ ಸುನ್ನೀ ಯುವ ಜನ ಸಂಘ(SYS)ವತಿಯಿಂದ “ವಿಚಾರಣೆಗೆ ಒಳಗಾಗುತ್ತಿರುವ ಸಲಫಿಸಂ”ಎಂಬ ದ್ಯೇಯ ವಾಖ್ಯದೊಂದಿಗೆ ಆದರ್ಶ ಕ್ಯಾಂಪೇನ್  ಈಗಾಗಲೇ ಕೇರಳದಲ್ಲಿ ನಡೆಯುತ್ತಿದೆ.

 

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!