ಜಿದ್ದಾ: 25 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಸೌದಿ ಟೂರಿಸ್ಟ್ ವಿಸಾ ಲಭಿಸಲಿದೆ ಎಂದು ಸೌದಿ ಟೂರೀಸಂ ಆ್ಯಂಡ್ ನ್ಯಾಶನಲ್ ಹೆರಿಟೇಜ್ ಕಮೀಷನ್ ನ ವರದಿಯನ್ನು ಆಧರಿಸಿ ಅರಬ್ ವಾರ್ತಾ ಮಾಧ್ಯಮಗಳು ವರದಿ ಮಾಡಿದೆ.ಅದಕ್ಕಿಂತ ಕೆಳಗಿನ ಮಹಿಳೆಯರಿಗೆ ವಿಸಾ ಲಭಿಸಬೇಕಾದಲ್ಲಿ ಆಕೆಯೊಂದಿಗೆ ಸಂಬಂಧಿಕರಲ್ಲಿ ಒಬ್ಬಾತ ಯಾತ್ರೆಯಲ್ಲಿ ಅನುಗಮಿಸ ಬೇಕಾಗುತ್ತದೆ.
30 ದಿವಸಗಳಿಗೆ ಟೂರಿಸ್ಟ್ ವಿಸಾ ಅನುವದಿಸಲಾಗುತ್ತಿದ್ದು, ಪ್ರಸ್ತುತ ವಿಸಾದಲ್ಲಿ ಒಂದು ಬಾರಿ ಮಾತ್ರ ಯಾತ್ರೆ ಮಾಡಬಹುದಾಗಿದೆ. ಇದೀಗ ಸೌದಿ ಯಲ್ಲಿರುವವರಿಗೂ ಟೂರೀಸಂ ವಿಸಾಗೆ ಅಪೇಕ್ಷೆ ಸಲ್ಲಿಸ ಬಹುದಾಗಿದೆ. ಈ ಹಿಂದೆ ಗೃಹ ಟೂರೀಸಂಗೆ ಮಾತ್ರ ಒತ್ತು ನೀಡುತ್ತಿದ್ದ ಸೌದಿ ಅರೇಬಿಯಾ ಈ ವರ್ಷದಿಂದ ವಿದೇಶಿ ಟೂರಿಸ್ಟ್ ಗಳಿಗಾಗಿ ವಿಸಾ ಅನುಮತಿಸಲು ಆರಂಭಿಸಿದೆ. ಅದಕ್ಕೆ ಸಂಬಂಧಿಸಿದ ಕಡತ ತಯಾರಾಗುತ್ತಿರುವುದಾಗಿ ತಿಳಿದು ಬಂದಿದೆ. ಉಮ್ರಾ ವಿಸಾದಲ್ಲಿ ಸೌದಿ ಗೆ ತಳುಪುವವರಿಗೆ ಅದರ ಕಾಲಾವಧಿ ಮುಗಿದ ನಂತರ ಟೂರೀಸಂ ವಿಸಾಗೆ ಬದಲಾಯಿಸುವ ಸೌಕರ್ಯ ಕೂಡ ಶೀಘ್ರದಲ್ಲೇ ಚಾಲ್ತಿಗೆ ಬರಲಿದೆ.
ಈ ಹಿಂದೆ 2008 ಮತ್ತು 2010ರ ಮಧ್ಯೆ ಪರೀಕ್ಷಣಾರ್ತವಾಗಿ ಟೂರೀಸಂ ವಿಸಾವನ್ನು ಉಪಯೋಗಿಸಲಾದಾಗ 32,000 ಸಂಚಾರಿಗಳು ಆಗಮಿಸಿದ್ದರು.