ಸೌದಿ ಅರೇಬಿಯಾ: ಕಾರ್ಮಿಕ ವಿಸಾವನ್ನು ನವೀಕರಿಸದವರಿಗೆ ಎಚ್ಚರಿಕೆ

ರಿಯಾದ್: ಸ್ಥಳೀಯ ಗುರುತು ಚೀಟಿ ‘ಇಖಾಮ’ ದ ಕಾಲಾವಧಿ ಮುಗಿಯವ ಮುನ್ನ ನವೀಕರಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೌದಿ ಪಾಸ್‌ಪೋರ್ಟ್ ಖಾತೆಯು ಅನಿವಾಸೀಯರನ್ನು ಎಚ್ಚರಿಸಿದೆ.

ನವೀಕರಣವನ್ನು ವಿಳಂಬ ಗೊಳಿಸಿದ್ದಲ್ಲಿ ಪ್ರಥಮ ಬಾರಿಗೆ ಐನೂರು ರಿಯಾಲ್ ದಂಡ ವಿಧಿಸಲಾಗುವುದು, ಎರಡನೇ ಬಾರಿ ಮುಂದುವರಿಸಿದರೆ 1000 ರಿಯಾಲ್ ದಂಡ ಪಾವತಿಸ ಬೇಕಾದೀತು. ಮೂರನೇ ಬಾರಿಗೆ ಸಿಕ್ಕಿ ಹಾಕಿಕೊಂಡರೆ 10,000 ರಿಯಾಲ್ ದಂಡ ಪಾವತಿಸ ಬೇಕಾಗುವುದು ಎಂದು ಅಧಿಕೃತರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ತಿಂಗಳುಗಳಲ್ಲಿ ಉಲ್ಲಂಘನೆಗೆ ಸಂಬಂಧಿಸಿದಂತೆ 361,370 ಅನಿವಾಸಿಗಳು ಸಿಕ್ಕಿ ಬಿದ್ದಿರುವುದಾಗಿ, ಸಾರ್ವಜನಿಕ ಸುರಾಕ್ಷಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಬಾಹಿರವಾಗಿ ಸೌದಿಗೆ ಪ್ರವೇಶ ಗೈಯ್ಯುವ ವೇಳೆ ಗಡಿಯಲ್ಲಿ 4,758 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 76 ಶೇಕಡಾ ಯಮನಿಗಳಾಗಿದ್ದು, 22ಶೇಕಡಾ ಇತೋಪ್ಯಾ ಮೂಲದವರು ಸೇರಿದ್ದಾರೆ. 78,135 ಕಾನೂನು ಉಲ್ಲಂಘನೆ ಮಾಡಿ ಸೆರೆಸಿಕ್ಕವರನ್ನು ಕಡಿಪಾರು ಮಾಡಲಾಗಿದೆ. 14,868 ಮಂದಿಗಳನ್ನು ಗಡಿಪಾರು ಮಾಡುವ ಸನ್ನಾಹಕ್ಕೆ ತಯಾರಿ ನಡೆಯುತ್ತಿದೆ.

ಇವರಲ್ಲಿ 2,528 ಮಹಿಳೆಯರು ಸೇರಿದ್ದು, 58,076 ಮಂದಿ ಕಾನೂನು ಉಲ್ಲಂಘಕರ ವಿವರಗಳನ್ನು ಅವರಿಗೆ ಬೇಕಾಗುವ ಯಾತ್ರಾ ದಾಖಲೆಗಳನ್ನು ತಯಾರಿಸುವ ಸಲುವಾಗಿ  ದೂತವಾಸ ಕೇಂದ್ರಗಳಿಗೆ ರವಾನಿಸಲಾಗಿದೆ. 122 ಸ್ವದೇಶಿಗಳಿಗೆ ಸಮೇತ ಸಹಾಯ ನೀಡಿದ ಅರೋಪವನ್ನು ಹೊರಿಸಿ 745 ಮಂದಿಯನ್ನು ಬಂಧಿಸಲಾಗಿದೆ. ಗೃಹ ಸಚಿವಾಲಯ, ವ್ಯವಹಾರ ಸಚಿವಾಲಯ ಮುಂತಾದವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ‘ಕಾನೂನು ಉಲ್ಲಂಘನೆ ಮುಕ್ತ ದೇಶ’ ಎಂಬ ಕ್ಯಾಂಪೇನ್ ನ ಭಾಗವಾಗಿ ನಡೆಸಲಾಗುವ ಈ ಕಾರ್ಯಾಚರಣೆ ಮುಂದುವರಿಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!