janadhvani

Kannada Online News Paper

ಕಾರ್ಕಳ: ಜ. 12:- ಎಸ್ಸೆಸ್ಸೆಪ್ ಕರ್ನಾಟಕ ರಾಜ್ಯ ಸಮಿತಿ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸುತ್ತಿರುವ ಪ್ರತಿಭೆಗಳ ಪ್ರತಿಭಾನ್ವೇಷಣೆಯಾದ ಪ್ರತಿಭೋತ್ಸವ ಉಡುಪಿ ಜಿಲ್ಲಾ ಮಟ್ಟದಲ್ಲಿ 2018 ಜನವರಿ 13 ಹಾಗೂ 14 ದಿನಾಂಕಗಳಲ್ಲಿ ಕಾರ್ಕಳದ ವಿದ್ಯಾ ಸಮುಚ್ಛಯ ತೈಬಾ ಗಾರ್ಡನ್ ಬಂಗ್ಲೆಗುಡ್ಡೆಯಲ್ಲಿ ನಡೆಯಲಿದೆ.

ಜೂನಿಯರ್, ಸೀನಿಯರ್, ಜನರಲ್, ದಅ್’ವಾ ಜೂನಿಯರ್, ದಅ್’ವಾ ಸೀನಿಯರ್, ಕ್ಯಾಂಪಸ್ ಜೂನಿಯರ್, ಕ್ಯಾಂಪಸ್ ಸೀನಿಯರ್ ಒಟ್ಟು 7 ವಿಭಾಗದಲ್ಲಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಎಂಬಿ ಡಿವಿಷನ್’ಗಳ ಸುಮಾರು 700ಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, 92 ವಿವಿಧ ಸ್ಪರ್ಧೆಗಳು, ಮೂರು ಪ್ರಮುಖ ವೇದಿಕೆಗಳಲ್ಲಿ ನಡೆಯಲಿದೆ.

ಜನವರಿ 13, ಶನಿವಾರ ಮಧ್ಯಾಹ್ನ 03 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಮಗ್’ರಿಬ್ ನಮಾಝಿನ ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದೆ.
ಜನವರಿ 14 ಆದಿತ್ಯವಾರ ಸಂಜೆ ಸಮಾರೋಪ ಸಮಾರಂಭದೊಂದಿಗೆ ಪ್ರತಿಭಾ ಸ್ಪರ್ಧೆಗೆ ತೆರೆಬೀಳಲಿದೆ.ಕಾರ್ಯಕ್ರಮದಲ್ಲಿ ಸಂಘಟನಾ ನಾಯಕರು, ಸಾಮಾಜಿಕ, ಇನ್ನಿತರ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಂದು ಎಸ್ಸೆಸ್ಸೆಫ್ ಜಿಲ್ಲಾ ಪ್ರತಿಭೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!
%d bloggers like this: