ಜನವರಿ 13 ,14 ರಂದು ಎಸ್ಸೆಸ್ಸೆಫ್ ದ.ಕ ಜಿಲ್ಲ್ಲಾ ಪ್ರತಿಭೋತ್ಸವ

ಮಂಗಳೂರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭೋತ್ಸವವು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜನವರಿ 13 ಶನಿವಾರ ಮತ್ತು 14 ಆದಿತ್ಯವಾರ ಎಂಬೀ ದ್ವಿದಿನಗಳಲ್ಲಿ
ಅಲ್- ಮದೀನಾ ವಿದ್ಯಾ ಸಂಸ್ಥೆ ಮಂಜನಾಡಿಯಲ್ಲಿ ನಡೆಯಲಿರುವುದು.

ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಎಸ್.ವೈ. ಎಸ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಉಸ್ತಾದರು ಉದ್ಘಾಟಿಸಲಿದ್ದಾರೆ .ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕರ್ನಾಟಕ ರಾಜ್ಯ ಸರಕಾರದ ಸಚಿವರಾದ ಯು.ಟಿ ಖಾದರ್,ಅಲ್- ಮದೀನಾ ವಿದ್ಯಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ , ಎಸ್.ವೈಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಮುಹಿಯುದ್ದೀನ್ ಸಅದಿ ತೋಟಾಲ್, ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್, ಇಸ್ಮಾಯಿಲ್ ಸಅದಿ ಉರುಮಣೆ, ಇಸ್ಮಾಯಿಲ್ ಸಅದಿ ಕಿನ್ಯಾ, ಇಸ್ಹಾಕ್ ಝುಹ್ರಿ ಕಾನಕೆರೆ, ಎನ್.ಎಸ್ ಕರೀಂ ಹಾಜಿ ನೆಕ್ಕರೆ, ನರಿಂಗಾನ ಗ್ರಾಮ ಪಂಚಾಯಿತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಗೋಡಿ, ಮಂಜನಾಡಿ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಅಸೈ, ಏಷ್ಯನ್ ಬಾವ ಹಾಜಿ ,ಬಾವುಚ್ಚ ನೆಕ್ಕರೆ ,ಕತ್ತರ್ ಬಾವ ಹಾಜಿ, ಮಹಮ್ಮದ್ ಹಾಜಿ ಖಂಡಿಕ, ಅಬ್ದುಲ್ ರಹಿಮಾನ್ ಚಂದಹಿತ್ಲು,ಮುರಳೀದರ ಶೆಟ್ಟಿ, ಅಬ್ಬಾಸ್ ಸಖಾಫಿ ಮಡಿಕೇರಿ, ಇಝುದ್ದೀನ್ ಅಹ್ಸನಿ ಕಲ್ಕಟ್ಟ್, ಇದ್ದಿನ್ ಕುಂಞ್ ಪಿಂಡಿಕೈ, ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕಣಚೂರು ಮೋನು ಹಾಜಿ ರವರನ್ನು ಸನ್ಮಾನಿಸಲಾಗುವುದು.

ಜನವರಿ 14 ಆದಿತ್ಯವಾರ ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಅಲ್- ಮದೀನಾ ವಿದ್ಯಾ ಸಂಸ್ಥೆಯ ಸಾರಥಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಮಂಜನಾಡಿ ಉದ್ಘಾಟಿಸಲಿದ್ದಾರೆ .ಕರ್ನಾಟಕ ಸರಕಾರದ ಸಚಿವರಾದ ಯು ಟಿ ಖಾದರ್ ,ಎಸ್.ವೈ.ಎಸ್ ಕರ್ನಾಟಕ ರಾಜ್ಯಾಧ್ಯಕ್ಜ ಜಿ.ಎಂ. ಮಹಮ್ಮದ್ ಕಾಮಿಲ್ ಸಖಾಫಿ, ಇಶಾರಾ ಸಂಪಾದಕ ಹಮೀದ್ ಬಜ್ಪೆ. ಅಬ್ದುಲ್ ರಹಿಮಾನ್ ಹಾಜಿ ಪ್ರಿಂಟೆಕ್, ಆಸಿಫ್ ಹಾಜಿ ಕೃಷ್ಣಾಪುರ, ಎಸ್ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು,ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪ್ರತಿಭೋತ್ಸವ ಸಮಿತಿ ಚಯರ್ ಮ್ಯಾನ್ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!