ಯುಎಇ: ವಾಹನ ಚಾಲಕರಲ್ಲಿ ಹೆಚ್ಚಿನವರು ಟ್ರಾಫಿಕ್ ಸಿಗ್ನಲ್ ಪಾಲಿಸಲು ತಿಳಿದಿಲ್ಲ!

ಶಾರ್ಜಾ : ಯುಎಇ ಯ ರಸ್ತೆಗಳಲ್ಲಿ ವಾಹನ ಚಲಾಯಿಸುವವರ ಪೈಕಿ ಹೆಚ್ಚಿನವರಿಗೆ ಟ್ರಾಫಿಕ್ ಸಿಗ್ನಲ್ಗಳನ್ನು ಪಾಲಿಸಿವುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಗ್ನಲ್ ತಲುಪುವಾಗ ಕೆಂಪು ದೀಪ ಉರಿಯುವ ಮುನ್ನ ವಾಹನವನ್ನು ವೇಗವಾಗಿ ಕೊಂಡೊಯ್ಯಲು ಶ್ರಮಿಸುವುದರಿಂದ ಅಪಘಾತ ಗಳು ಹೆಚ್ಚಾಗುತ್ತಿದೆ ಎಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ.

ರಸ್ತೆ ಸುರಕ್ಷತೆಯ ಅಂಗವಾಗಿ ಶಾರ್ಜಾ ಪೊಲೀಸರು ಹೊಸ ಕ್ಯಾಂಪೈನ್ ನೊಂದಿಗೆ ರಂಗಪ್ರವೇಶ ಗೈದಿದ್ದಾರೆ. ಅಜಾಗರೂಕತೆಯಿಂದ ವಾಹನ ಚಲಾಯಿಸುವವರನ್ನು ನೇರ ದಾರಿಗೆ ಕೊಂಡೊಯ್ಯುವ ಸಲುವಾಗಿ ಈ ನಡೆ ಎನ್ನಲಾಗಿದೆ. ರಸ್ತೆ ಬದಿ ಸಂಚರಿಸುವವರೂ ಕಾನೂನನ್ನು ಪಾಲಿಸುವಂತೆ ಪೊಲೀಸರು ಹೇಳಿದ್ದಾರೆ.

ಹಲದಿ ದೀಪ ಉರಿಯು ಮುನ್ನ ವೇಗವಾಗಿ ವಾಹನ ಚಲಾಯಿಸುವುದು ಅಪಘಾತ ಸಂಭವಿಸಲು ಪ್ರಮುಖ ಕಾರಣವಾಗಿದೆ ಎಂಬುದು ಪೊಲೀಸರ ನಿಗಮನವಾಗಿದೆ. ಅಪಘಾತ ತಡೆಗಟ್ಟಲು ಮತ್ತು ಜನರಿಗೆ ಮಾಹಿತಿ ನೀಡುವ ಸಲುವಾಗಿ ವೀಡಿಯೋ ತುಣುಕುಗಳನ್ನು ಯುಎಇ ಪೊಲೀಸರು ಬಿಡುಗಡೆ ಮಾಡಿದ್ದಾರೆ.

2016 ರಲ್ಲಿ ಉಂಟಾದ ಅಪಘಾತ ಮರಣಗಳು ಮತ್ತು ಗಂಭೀರ ಗಾಯಗಳು,ಕೆಂಪು ದೀಪ ಉರಿಯುವ ಮುನ್ನ ವಾಹನವನ್ನು ಅತ್ಯಂತ ವೇಗವಾಗಿ ಕೊಂಡೊಯ್ದ ಕಾರಣ ಸಂಭವಿಸಿದೆ  ಎಂದು ಅಂಕಿಅಂಶಗಳು ತಿಳಿಸುತ್ತವೆ. ವರ್ಷದಲ್ಲಿ 70,000 ಅಪಘಾತಗಳು ಈ ರೀತಿ ಉಂಟಾಗುತ್ತದೆ. (22,000 ಅಬುಧಾಬಿ, 25,000 ದುಬೈ, 23,000 ಶಾರ್ಜಾ)

2017ರ ಹೊಸ ಯುಎಇ ಫೆಡರಲ್ ಟ್ರಾಫಿಕ್ ಕಾನೂನಿನ ಅನುಸಾರವಾಗಿ ಸಣ್ಣ ವಾಹನ ಕೆಂಪು ದೀಪವನ್ನು ಕಡೆಗಣಿಸಿದರೆ 100 ದಿರ್‌ಹಂ ದಂಡ ಮತ್ತು 12 ಬ್ಲ್ಯಾಕ್ ಪಾಯಿಂಟ್ ಶಿಕ್ಷೆ ನೀಡಲಾಗುತ್ತದೆ. ಟ್ರಕ್ ಚಾಲಕರು ಉಲ್ಲಂಘನೆ ಮಾಡಿದರೆ 3000 ದಿರ್‌ಹಂ ದಂಡ ವಿಧಿಸುದರೊಂದಿಗೆ ಒಂದು ವರ್ಷ ಅವರ ಲೈಸೆನ್ಸ್ ಸಸ್ಪೆಂಡ್ ಮಾಡಲಾಗುವುದು.

 ಈ ಮೂರು ವಿಷಯಗಳನ್ನುಚಾಲಕರು ಗಮನಿಸಿರಿ
*ಟ್ರಾಫಿಕ್ ಸಿಗ್ನಲ್ ತಳುಪಿದಾಗ ದೀಪಗಳನ್ನು ಸರಿಯಾಗಿ ಗಮನಿಸಿ
*ಹಲದಿ ದೀಪ ಉರಿದರೆ ವಾಹನದ ವೇಗ ನಿಯಂತ್ರಿಸಿ ಕೆಂಪು ದೀಪ ಉರಿಯುವ ವರೆಗೆ ಕಾಯಿರಿ
* ಮುಂದೆ ನಿಂತಿರುವ ವಾಹನಗಳನ್ನು ಸರಿಯಾಗಿ ನಿರೀಕ್ಷಿಸಿರಿ ಯಾಕೆಂದರೆ ಅದು ತಕ್ಷಣ ಬ್ರೇಕ್ ಹಾಕುವ ಸಾಧ್ಯತೆ ಇದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!