ಜಿದ್ದಾ : ಈ ವರ್ಷದ ಹಜ್ ಯಾತ್ರೆಗೆ ಭಾರತದಿಂದ ಹೆಚ್ಚುವರಿಯಾಗಿ 5000 ಯಾತ್ರಿಕರನ್ನು ಸೇರಿಸಲು ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದೆ. ಆದಿತ್ಯವಾರ ಸಹಿ ಹಾಕಲಾದ ಹಜ್ ಒಡಂಬಡಿಕೆಯಲ್ಲಿ ಸೂಚಿಸಲಾದ ಪ್ರಥಮ ಹಂತದ 1,25,025 ಹಜ್ಜಾಜ್ಗಳ ಹೊರತಾಗಿ ಈ ಹೆಚ್ಚುವರಿ ಅವಕಾಶವನ್ನು ನೀಡಲಾಗಿದೆ. ಈ ಮೂಲಕ ಭಾರತದಿಂದ ಒಟ್ಟಾರೆ 1,75,025 ಮಂದಿ ಹಜ್ ಯಾತ್ರೆಗೆ ತೆರಳಬಹುದಾಗಿದೆ.
ಅದೇ ವೇಳೆ ಈ ಹಜ್ ಸೀಝನಲ್ಲಿ ಅಪೇಕ್ಷೆ ಸಲ್ಲಿಸಿದವರ ಸಂಖ್ಯೆ 3.6 ದಾಟಿದೆ ಎಂದು ಒಡಂಬಡಿಕೆಗೆ ಸಹಿ ಹಾಕಿದ ನಂತರ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದರು.
ಇತರ ಸೇವೆಗಳೊಂದಿಗೆ ಭಾರತೀಯ ಹಜ್ಜಾಜ್ಗಳಿಗೆ ಅಂತರ್ಜಾಲದ ಮೂಲಕ ಲಭ್ಯವಿರುವ ಸೇವಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಕಾನ್ಸುಲ್ ಜನರಲ್ ನೂರ್ ರಹ್ಮಾನ್ ಶೈಖ್ ವ್ಯಕ್ತಪಡಿಸಿದ್ದಾರೆ. ಭಾರತದ ಈ ನಿಲುವುಗಳು ಸೌದಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಜ್ ಅಕೊಮೊಡೆಶನ್ ಲಾಕೇಟರ್ ಎಂಬ ಮೊಬೈಲ್’ ಅಪ್ಲಿಕೇಶನ್ ಮೂಲಕ ಹಜ್ ಮಿಷನ್ ನ ವಾಟ್ಸ್ ಆಪ್ ಸೇವೆಗಳು,ಎಸ್ಸೆಮ್ಮೆಸ್ ಅಲರ್ಟ್ ಸಿಸ್ಟಮ್, ದಿನರಾತ್ರ ಹೆಲ್ಪ್ ಲೈನ್ ಸೇವೆ, ಬ್ಯಾಗೇಜ್ ಸಿಸ್ಟಮ್, ಮೊಬೈಲ್ ಸಿಮ್ ಕಾರ್ಡ್ ಮತ್ತು ಬಲಿಮೃಗದ ಕೂಪನ್ ಮುಂತಾದವುಗಳನ್ನು ಊರಲ್ಲೇ ನೀಡುವಂತಹ ಸೇವೆಯ ಪರಿಶ್ರಮದಲ್ಲಿದೆ ಹಜ್ ಮಿಷನ್. ಹಡಗು ಮುಖಾಂತರ ಹಜ್ ಯಾತ್ರೆಯನ್ನೂ ಸೌದಿ ಸರಕಾರ ಅನುಮತಿಸಿದ್ದು,ಮುಂದಿನ ವರ್ಷದಿಂದ ಅದು ಕಾರ್ಯ ರೂಪಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.