ಅಶಾಂತಿಗೆ ಕಾರಣ ಬಿಜೆಪಿ,ಆರ್​ಎಸ್​ಎಸ್: ಪಿಎಫ್​ಐಯನ್ನು ನಿಷೇಧಿಸುವ ಅಗತ್ಯವಿಲ್ಲ-ವೇಣುಗೋಪಾಲ್

ವಿಜಯಪುರ: ಪಿಎಫ್​ಐಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕೋಮಿನ ಮೇಲೆ ಅಶಾಂತಿ ಹರಡುತ್ತಿರುವವರು ಬಿಜೆಪಿ ಹಾಗೂ ಆರ್​ಎಸ್​ಎಸ್​ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ. ಸಿ. ವೇಣುಗೋಪಾಲ್​ ಹೇಳಿದ್ದಾರೆ.

ಬಿಜೆಪಿ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ. ತಮ್ಮ ಕ್ರಿಮಿನಲ್​ ರಾಜಕೀಯದಿಂದ ಅವರು ಹೊರ ಬರಲಿ ಎಂದು ವೇಣುಗೋಪಾಲ್​ ಹೇಳಿದರು.ಆರ್​​ಎಸ್​​ಎಸ್​ ಅಷ್ಟೇ ಅಲ್ಲ, ಹಿಂದುತ್ವ ಮೂಲಭೂತವಾದಿಗಳು ಅಥವಾ ಬೇರೆ ಯಾರೇ ಆಗಿರಲಿ ಅವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಮತ್ತು ಅಪರಾಧ ಪ್ರಕರಣಗಳಲ್ಲಿಯೂ ಬಿಜೆಪಿ ಹಾಗೂ ಆರ್​ಎಸ್​ಎಸ್​ ಪಾತ್ರ ಇದೆ ಎಂದ ಅವರು, ರಾಜ್ಯದಲ್ಲಿ ಜನರನ್ನು ಕೋಮು ಆಧಾರದ ಮೇಲೆ ವಿಭಜಿಸಿ ಶಾಂತಿ ಹದಗೆಡಿಸಲು ಇವರು ಪ್ರಯತ್ನಿಸುತ್ತಿದ್ದಾರೆ ಎಂದರು.

ಆದರೆ, ಕರ್ನಾಟಕದ ಜನ ಜಾಣರಿದ್ದಾರೆ. ಬಿಜೆಪಿಯ ಹಾಗೂ ಆರ್​ಎಸ್​ಎಸ್​ನ ಕೋಮು ವಿಭಜನೆಯ ತಂತ್ರ ಬಲ್ಲವರಾಗಿದ್ದಾರೆ. ಚುನಾವಣೆಯಲ್ಲಿ ಕನ್ನಡಿಗರು ಇದಕ್ಕೆ ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್​ ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಸೀಟು ಪಡೆಯಲಿದೆ ಎಂದರು.

 

Leave a Reply

Your email address will not be published. Required fields are marked *

error: Content is protected !!