ಇಂದು ಪರಪ್ಪನಂಗಾಡಿಯಲ್ಲಿ ಅಪೂರ್ವ ಸಂಗಮ: 4 ಉಲಮಾ ಸಂಘದ ನಾಯಕರು ಒಂದೇ ವೇದಿಕೆಯಲ್ಲಿ

ಪರಪ್ಪನಂಗಾಡಿ(ಮಲಪ್ಪುರಂ): ಶೈಖುಲ್ ಮಶಾಇಖ್ ಅವುಕ್ಕೋಯ ಮುಸ್ಲಿಯಾರ್ ರವರಿಂದ ಸ್ಥಾಪಿಸಲ್ಪಟ್ಟ ಇತಿಹಾಸ ಪ್ರಸಿದ್ಧವಾದ ಕೇರಳದ ಮಲಪ್ಪುರಂ ಜಿಲ್ಲೆಯ ಪರಪ್ಪನಂಗಾಡಿ ಕೇಂದ್ರ ಜುಮಾ ಮಸೀದಿಯಲ್ಲಿ ಸುದೀರ್ಘ ವಾದ 56 ವರ್ಷ ಗಳಿಂದ ದರ್ಸ್ ನಡೆಸುತ್ತಿರುವ ಕೇರಳ ಸಂಸ್ಥಾನ ಜಂ ಇಯ್ಯತುಲ್ ಉಲಮಾ ಅಧ್ಯಕ್ಷರಾದ ಖ್ಯಾತ ವಿದ್ವಾಂಸರೂ ಪ್ರಸಿದ್ಧ ಬರಹಗಾರರೂ ಇಸ್ಲಾಮೀ ಕರ್ಮ ಶಾಸ್ತ್ರ ಪರವಾದ ಯಾವುದೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವುದರಲ್ಲಿ ನಿಪುಣರೂ ಸಹಸ್ರಾರು ವಿದ್ವಾಂಸರ ಗುರುವರ್ಯರೂ ಹಲವು ಗ್ರಂಥಗಳ ಕರ್ತರೂ ಆದ ತಾಜುಲ್ ಮುಹಖ್ಖಿಖೀನ್ ಯನ್ ಕೆ ಮುಹಮ್ಮದ್ ಮೌಲವಿ ಯವರನ್ನು ಗೌರವಿಸುವ ಕಾರ್ಯಕ್ರಮವು ಜನವರಿ 11 ಗುರುವಾರ ಸಂಜೆ 6:30 ಕ್ಕೆ ಪರಪ್ಪನಂಗಾಡಿ ಅವುಕ್ಕೋಯ ಮುಸ್ಲಿಯಾರ್ ನಗರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್
(ಅಧ್ಯಕ್ಷರು: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ), ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ಪಾಣಕ್ಕಾಡ್(ಉಪಾಧ್ಯಕ್ಷರು: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ), ತಾಜುಲ್ ಮುಹಖ್ಖಿಖೀನ್ ಯನ್. ಕೆ. ಮುಹಮ್ಮದ್ ಮೌಲವಿ (ಅಧ್ಯಕ್ಷರು:ಕೇರಳ ಸಂಸ್ಥಾನ ಜಂ ಇಯ್ಯತುಲ್ ಉಲಮಾ), ವಿ. ಯಂ. ಮೂಸಾ ಮೌಲವಿ ವಡುತಲ
(ಅಧ್ಯಕ್ಷರು : ದಕ್ಷಿಣ ಕೇರಳ ಜಂ ಇಯ್ಯತುಲ್ ಉಲಮಾ) ಮುಂತಾದ ವಿವಿಧ ಉಲಮಾ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ

ಬೆಳಿಗ್ಗೆ 10 ಗಂಟೆಯಿಂದ ಶಿಷ್ಯ ಸಂಗಮವು ನಡೆಯಲಿದ್ದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸ್ಥಾನ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಮೌಲಾನಾ ನಜೀಬ್ ಮೌಲವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

 

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!