ದಮ್ಮಾಮ್:’ಇಶಾರ ಕನ್ವೆನ್ಷನ್-2018′ ವೈವಿದ್ಯಮಯ ಕಾರ್ಯಕ್ರಮ ನಡೆಯಲಿದೆ

ದಮ್ಮಾಮ್:ಅನಿವಾಸಿ ಕನ್ನಡಿಗ ಸಹೋದರರ ಹೆಮ್ಮೆಯ ಸಂಘಟನೆಯಾದ ಕೆ.ಸಿ.ಎಫ್ ವತಿಯಿಂದ ಇಶಾರ ಕನ್ವೆನ್ಷನ್ 2018 ಎಂಬ ಕಾರ್ಯಕ್ರಮವು ಫೆ.16,ಶುಕ್ರವಾರ ನಡೆಯಲಿದೆ.ದಮ್ಮಾಮ್ 91 ನಲ್ಲಿರುವ ಮಲಿಕತುಲ್ ಲೈಲ್ ಇಸ್ತಿರಾಹದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಏನು? ಎಂಬ ವಿಷಯದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಮುಖಂಡರುಗಳಿಂದ ‘ಟಾಕ್ ಶೋ’ , ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ಮಹಿಳೆಯರ ಆರೋಗ್ಯ ರಕ್ಷಣೆ ಎಂಬ ವಿಷಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸೇರಿದಂತೆ ಇನ್ನೂ ಹಲವಾರು ವೈವಿದ್ಯಮಯ  ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯಾಚರಿಸಲು ಈ ಕೆಳಕಂಡ ತಂಡವನ್ನು ರಚಿಸಲಾಗಿದೆ.

ಗೌರವ ಅಧ್ಯಕ್ಷರು: ಅಬುಬಕ್ಕರ್ ಪಡುಬಿದ್ರಿ (RAISCO), ಅಧ್ಯಕ್ಷರು: ಹನೀಫ್ ಮಂಜನಾಡಿ, ಕಾರ್ಯದರ್ಶಿ: ಮುಹಮ್ಮದ್ ಮಲೆಬೆಟ್ಟು, ಜೊತೆ ಕಾರ್ಯದರ್ಶಿ: ಸಮೀವುಲ್ಲಾ ಗೂಡಿನಬಳಿ, ಖಜಾಂಜಿ: ಅಬುಬಕ್ಕರ್ ಕೋಡಿ, ಸಂಘಟನಾ ತರಗತಿ:ರಶೀದ್ ಸಖಾಫಿ, ಅಝೀಝ್ ಸಅದಿ,  ಫಾರೂಖ್ ಕಾಟಿಪಳ್ಳ ಸೇರಿದಂತೆ ಹಲವಾರು  ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ  ಹನೀಫ್ ಮಂಜನಾಡಿ, ಶಫೀಖ್ ಕಾಟಿಪಳ್ಳ, ಫೈಝಲ್ ಕೃಷ್ಣಾಪುರ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!