janadhvani

Kannada Online News Paper

ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಒಂದು ಎಕರೆ ಜಾಗ ಎ.ಪಿ ಉಸ್ತಾದರಿಗೆ ಹಸ್ತಾಂತರಿಸಿದ ಕೊಡಗು ಜಿ.ಪಂ ಸದಸ್ಯ ಅಬ್ದುಲ್ ಲತೀಫ್ ಶುಂಠಿಕೊಪ್ಪ.

ಬೆಂಗಳೂರು : (ಜನಧ್ವನಿ ವಾರ್ತೆ)  ಭೀಕರ ಮಳೆಯಿಂದ ತತ್ತರಿಸಿ ಮನೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿರುವ ಕೊಡಗಿನ ಜನತೆಗೆ ವಸತಿ ಸೌಲಭ್ಯಗಳನ್ನು ಒದಗಿಸಿಕೊಡಲು ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರೂ, ಕೊಡಗು ಜಿಲ್ಲಾ ಸುನ್ನೀ ಮ್ಯಾನೇಜ್ಮೆಂಟ್ ಅಧ್ಯಕ್ಷರೂ ಆಗಿರುವ ಪಿ.ಎಂ ಅಬ್ದುಲ್ ಲತೀಫ್ ಶುಂಠಿಕೊಪ್ಪರವರು ತನ್ನ ಬೆಲೆಬಾಳುವ ಒಂದು ಎಕರೆ ಸ್ಥಳವನ್ನು ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ಹಸ್ತಾಂತರಿಸಿದರು.


ಕೊಡಗಿನ ಸಂತ್ರಸ್ತ ಜನತೆಗೆ ಜಾತಿ,ಧರ್ಮ ಬೇಧ ಭಾವವಿಲ್ಲದೆ ಎಸ್ಸೆಸ್ಸಫ್, ಎಸ್ ವೈ ಎಸ್ ಹಾಗೂ ಕೆಸಿಎಫ್ ಸಂಘಟನೆಗಳು ಜಂಟಿಯಾಗಿ ಸರ್ಕಾರದ ಸಹಭಾಗಿತ್ವದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವದ ಯೋಜನೆಯನ್ನು ಕೈಗೊಂಡಿದೆ.


ಈ ಸಂದರ್ಭದಲ್ಲಿ ವಸತಿ ಸಚಿವ ಯು.ಟಿ ಖಾದರ್, ಸಿ.ಎಂ ಇಬ್ರಾಹಿಂ ತನ್ವೀರ್ ಹಾಶಿಂ, ಮಾಜಿ ಸಚಿವ ರೋಶನ್ ಬೇಗ್, ಮಾಜಿ ಎಂ ಎಲ್ ಸಿ ಸತ್ತಾರ್ ಸೇಠ್, ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಸದಸ್ಯ ಮೌಲಾನ ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು, ಎಸ್ಸೆಸ್ಸಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಸಹಿತ ಹಲವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com