ಆಧಾರ್ ಡೇಟಾ ಗೌಪ್ಯತೆಯನ್ನು ಸುರಕ್ಷಿತವಾಗಿರಿಸಲು ‘ವರ್ಚ್ಯುಯಲ್ ಐಡಿ’ ಉಪಯೋಗಿಸಿ

ನವದೆಹಲಿ: ಅಕ್ರಮವಾಗಿ ಆಧಾರ್ ಮಾಹಿತಿ ಪಡೆದುಕೊಳ್ಳುವುದು ಸಾಧ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ), ಖಾಸಗಿತನದ ರಕ್ಷಣೆಗಾಗಿ ‘ವರ್ಚ್ಯುಯಲ್ ಐಡಿ’ ಎಂಬ ಹೊಸ ಪರಿಕಲ್ಪನೆಯನ್ನು ಬುಧವಾರ ಪರಿಚಿಯಿಸಿದೆ.
ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ಇನ್ನು ಮುಂದೆ ತಾನು ನೀಡಿದ ದತ್ತಾಂಶ ರಕ್ಷಣೆಗಾಗಿ ಯುಐಡಿಎಐ ವೆಬ್ ಸೈಟ್ ನಿಂದ ‘ವರ್ಚ್ಯುಯಲ್ ಐಡಿ’  ಪಡೆದುಕೊಂಡು ಅದನ್ನು ಸಿಮ್ ಪರಿಶೀಲನೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಆಧಾರ್ ಕಾರ್ಡ್ ಬದಲು ಬಳಸಬಹುದು ಎಂದು ಹೇಳಿದೆ.
ಈ ಹೊಸ ಪರಿಕಲ್ಪನೆಯಲ್ಲಿ ಆಧಾರ್ ಸಂಖ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರುವ ಆಯ್ಕೆಯನ್ನು ನೀಡಲಾಗಿದೆ. ‘ವರ್ಚ್ಯುಯಲ್ ಐಡಿ’ 16 ಸಂಖ್ಯೆಯನ್ನು ಹೊಂದಿದ್ದು, ಆಧಾರ್ ಕಾರ್ಡ್ ನೊಂದಿಗೆ ಇದನ್ನು ಬಳಸಬಹುದಾಗಿದೆ. ‘ವರ್ಚ್ಯುಯಲ್ ಐಡಿ’ ಮೂಲಕ ಮಾಹಿತಿಯನ್ನು ಕೇವಲ ಹೆಸರು, ವಿಳಾಸ ಮತ್ತು ಫೋಟೋಗೆ ಮಾತ್ರ ಸೀಮಿತಗೊಳಿಸಲಾಗಿದೆ ಮತ್ತು ಯಾವುದೇ ಪರಿಶೀಲನೆಗೆ ಇದು ಸಾಕಾಗುತ್ತದೆ ಎಂದು ಯುಐಡಿಎಐ ಹೇಳಿದೆ.
ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಹಲವು ‘ವರ್ಚ್ಯುಯಲ್ ಐಡಿ’ ಪಡೆದುಕೊಳ್ಳಲು ಅವಕಾಶವಿದ್ದು, ಹೊಸ ‘ವರ್ಚ್ಯುಯಲ್ ಐಡಿ’ ಪಡೆದಾಗ ಹಳೆಯ ಐಡಿ ರದ್ದಾಗುತ್ತದೆ ಎಂದು ಯುಐಡಿಎಐ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!