ವಿದ್ಯಾಲಯದಲ್ಲಿ ಹಿಂದೂ ಧರ್ಮದ ಪ್ರಾರ್ಥನೆ:ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟೀಸ್

ನವದೆಹಲಿ: ಸರ್ಕಾರ ನಡೆಸುತ್ತಿರುವ ಕೇಂದ್ರೀಯ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಂದ ಹಿಂದು ಧರ್ಮದ ಪ್ರಾರ್ಥನೆ ಮಾಡಿಸುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಸರ್ಕಾರಿ ಶಾಲೆಯಲ್ಲಿ ಯಾವುದೇ ಒಂದು ಧರ್ಮವನ್ನು ಪ್ರೋತ್ಸಾಹಿಸುವಂತಿಲ್ಲ. ಹಾಗಿರುವಾಗ ಕೇಂದ್ರೀಯ ವಿದ್ಯಾಲಯದಲ್ಲಿ ಹಿಂದು ಪ್ರಾರ್ಥನೆಯನ್ನು ಹಾಡಲು ಹೇಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಈ ಬಗ್ಗೆ ಮಧ್ಯಪ್ರದೇಶದ ವಿನಾಯಕ್ ಷಾ ಎನ್ನುವವರು ಕೋರ್ಟ್​ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಎಂದು ಪರಿಗಣಿಸಿ ನೋಟಿಸ್ ನೀಡಿದೆ. ವಿದ್ಯಾಲಯದಲ್ಲಿ ಬೆಳಗ್ಗಿನ ಸಭೆಯಲ್ಲಿ ನಾನಾ ಮತ, ಧರ್ಮ, ನಂಬಿಕೆಗಳ ವಿದ್ಯಾರ್ಥಿಗಳಿಗೆ ಹಿಂದು ಪ್ರಾರ್ಥನೆ ಹಾಡುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದರು.

1125 ಕೇಂದ್ರೀಯ ವಿದ್ಯಾಲಯಗಳು ಭಾರತದಲ್ಲಿದ್ದು, 3 ವಿದೇಶದಲ್ಲಿವೆ. ಸುಮಾರು 11 ಲಕ್ಷ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!