ಇರಾಕ್ ಗೆ ಸಂಪೂರ್ಣ ಬೆಂಬಲದ ವಾಗ್ದಾನ ನೀಡಿದ ಕುವೈಟ್

ಕುವೈಟ್ ಸಿಟಿ: ಇರಾಕಿನಲ್ಲಿ ಸುರಕ್ಷೆ ಮತ್ತು ಸ್ಥಿರತೆ ಉಂಟಾಗುವ ವರೆಗೆ ತಮ್ಮ ಎಲ್ಲಾ ರೀತಿಯ ಬೆಂಬಲವು ಇರಾಕಿಗೆ ಇದೆ ಎಂದು ಕುವೈಟ್ ಹೇಳಿಕೊಂಡಿದೆ. ಇರಾಕಿನ ಕೌನ್ಸಿಲ್ ಆಫ್ ಮಿನಿಸ್ಟರ್ಸ್ ಸೆಕ್ರೆಟರಿ ಜನರಲ್ ಡಾ. ಮಹ್ದಿ ಅಲಾಖ್ ರೊಂದಿಗೆ, ಕುವೈಟ್ ಡೆಪ್ಯುಟಿ ವಿದೇಶಾಂಗ ಸಚಿವ ಖಾಲಿದ್ ಅಲ್ ಜರಲ್ಲ ಚರ್ಚೆ ನಡೆಸಿದ ನಂತರ ಈ ಹೇಳಿಕೆ ನೀಡಲಾಗಿದೆ.

ಇರಾಕ್‌ನ ಮರು ನಿರ್ಮಾನಕ್ಕಾಗಿ ನಡೆಸುವ ಅಂತರಾಷ್ಟ್ರೀಯ ಸಮ್ಮೇಳನ ಫೆ.12ರಿಂದ 14ರ ವರೆಗೆ ಕುವೈಟಿನಲ್ಲಿ ನಡೆಯಲಿದೆ. ಈ ವರೆಗೆ ಇರಾಕ್ ಗೆ ನೀಡುತ್ತಾ ಬಂದ ಸಹಕಾರವನ್ನು ತಡೆಯಲಾಗಿಲ್ಲ. ಅಲ್ಲಿನ ಸರಕಾರವು ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಜಯ ಸಾಧಿಸಿರುವುದರಲ್ಲಿ ಅಭಿಮಾನವಿದೆ ಎಂದು ಜರಲ್ಲ ಹೇಳಿದ್ದಾರೆ.

ಕುವೈಟ್ ಅಮೀರ್ ಶೈಖ್ ಸಬಾ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾರ ಪ್ರತ್ಯೇಕ ಇಂಗಿತದಂತೆ ಇರಾಕ್‌ನ ಮರು ನಿರ್ಮಾಣ ಕ್ಕಾಗಿ ನಡೆಸಲು ಉದ್ದೇಶಿಸಲಾದ ಸಮ್ಮೇಳವನ್ನು ಕುವೈಟಿನಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಖಾಸಗಿ ವಲಯದವರಿಗೆ ಇರಾಕ್ ಪುನರ್ನಿರ್ಮಾಣ ದಲ್ಲಿ ಸಹಭಾಗಿತ್ವ ನೀಡುವ ಸಲುವಾಗಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವ ಬ್ಯಾಂಕಿನ ಈಡಿನ ಮೇಲೆ ಖಾಸಗಿ ವಲಯ ತೊಡಗಿಸಿಕೊಳ್ಳಲಿದೆ. ಸುಮಾರು 100 ಬಿಲಿಯನ್ ಡಾಲರ್ ಅಂದಾಜು ಮೊತ್ತ ಮರು ನಿರ್ಮಾಣಕ್ಕೆ ಬೇಕಾಗ ಬಹುದು ಎಂದು ಅಂದಾಜಿಸಲಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!