ಯುಎಇ: ಮಹತ್ವಪೂರ್ಣ ತೀರ್ಮಾನ ,ಕಾರ್ಮಿಕ ವಿಸಾಗೆ ಸ್ವಭಾವ ಸರ್ಟಿಫಿಕೇಟ್ ಕಡ್ಡಾಯ

ದುಬೈ: ಯುಎಇ ಯಲ್ಲಿ ಇನ್ನು ಮುಂದೆ ಕೆಲಸ ಹುಡುಕಿ ಬರುವವರು ತಮ್ಮ ಸ್ವಭಾವ ಸರ್ಟಿಫಿಕೇಟ್ ನೀಡುವುದು ಕಡ್ಡಾಯಗೊಳಿಸಲಾಗಿದೆ. ಫೆ.4ರಿಂದ ಇದು ಅನುಷ್ಠಾನಕ್ಕೆ ಬರಲಿದೆ. ವಿದೇಶಿಯರು ತಮ್ಮ ದೇಶದಿಂದ ಅಥವಾ ಈ ಹಿಂದೆ ಐದು ವರ್ಷಗಳಿಂದ ಕೆಲಸ ಮಾಡಿದ ದೇಶದಿಂದ ಸ್ವಭಾವ ಸರ್ಟಿಫಿಕೇಟ್ ನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗಿದೆ.

ತಮ್ಮ ದೇಶಗಳಲ್ಲಿರುವ ಯುಎಇ ಕಾರ್ಯಾಲಯ ಅಥವಾ ಯುಎಇ ವಿದೇಶಾಂಗ- ರಾಜ್ಯಾಂಗ ಸಹಕಾರ ಸಚಿವಾಲಯದ ಅಂಗವಾದ ಹ್ಯಾಪಿನೆಸ್ ಕೇಂದ್ರಗಳಲ್ಲಿ ಅವನ್ನು ನೀಡಿ ಖಾತರಿಪಡಿಸಿಕೊಳ್ಳಬೇಕು.ಕೆಲಸದ ವಿಸಾ ಪಡೆಯುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಉಳಿದಂತೆ, ಕುಟುಂಬದವರಿಗೆ, ಆಶ್ರಿತರಿಗೋ ಇದು ಅನ್ವಯಿಸುವುದಿಲ್ಲ. ಸಂದರ್ಶಕ ವಿಸಾದಲ್ಲಿ ಬರುವವರಿಗೂ ಅನ್ವಯವಾಗುವುದಿಲ್ಲ. ಸಾಮಾಜಿಕ ಒಳುಮೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಕಾನೂನು ಜಾರಿಗೊಳಿಸಲು ಸರಕಾರ ತೀರ್ಮಾನ ಕೈಗೊಂಡಿದೆ ಎಂದು ಅಧಿಕೃತರು ಸ್ಪಷ್ಟಪಡಿಸಿದ್ದಾರೆ.

 

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!