janadhvani

Kannada Online News Paper

ಸೌದಿಯಲ್ಲಿ ಲೆವಿ ಮತ್ತು ಆರ್ಥಿಕ ಬಿಕ್ಕಟ್ಟು: ಖಾಸಗಿ ಸಂಸ್ಥೆಗಳಿಗೆ ಭಾರೀ ಹೊಡೆತ

ಜಿದ್ದಾ :ಸೌದಿಯಲ್ಲಿ ಲೆವಿ ಮತ್ತು ಆರ್ಥಿಕ ಬಿಕ್ಕಟ್ಟುಗಳು ಖಾಸಗಿ ಸಂಸ್ಥೆಗಳ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಖಾಸಗಿ ವಲಯಗಳಲ್ಲಿ 90% ರಷ್ಟು ಸಣ್ಣದಾದ ಸಂಸ್ಥೆಗಳಿವೆ. ವಿದೇಶೀಯರಿಗೆ ಲೆವಿಯನ್ನು ಪ್ರತಿ ವರ್ಷವೂ ಹೆಚ್ಚಿಸುವುದರಿಂದ ಇಂತಹ ಸಂಸ್ಥೆಗಳ ಕಾರ್ಯನಿರ್ವಹಣೆಗೆ ವೆಚ್ಚ ಹೆಚ್ಚಾಗುತ್ತದೆ.ಸಣ್ಣದಾದ ಸಂಸ್ಥೆಗಳಲ್ಲಿ ಸ್ವದೇಶೀಕರಣ ಜಾರಿ ಕಡ್ಡಾಯಗೊಳಿಸಿದ ಕಾರಣ ಅವುಗಳ ಪೈಕಿ ಕೆಲವು ಸಂಸ್ಥೆಗಳಿಗೆ ಬೀಗ ಜಡಿಯಲಾಗಿದೆ.

ಸೌದಿ ವಂಶಜರನ್ನು ಕೆಲಸಕ್ಕೆ ನೇಮಿಸಬೇಕಾದಲ್ಲಿ ಕನಿಷ್ಠ 3,000 ರಿಂದ 5,000 ರಿಯಾಲ್ ವೇತನ ನೀಡಬೇಕು. ವಿದೇಶಿಗಳಿಗೆ ಸಂಬಂಧಿಸಿದಂತೆ ಅದರ ಮೂರನೆಯೊಂದನ್ನು ನೀಡಿದರೆ ಸಾಕು. ಸಂಬಳ, ಲೆವಿ, ಟಿಕೆಟ್ ಮತ್ತು ಇಖಾಮಾ ನವೀಕರಣಗಳು ಮತ್ತು ಇತರ ವೆಚ್ಚಗಳು ಸೇರಿದಂತೆ ವಿದೇಶೀಯರನ್ನು ಕೆಲಸಕ್ಕೆ ನೇಮಕಗೊಳಿಸಲು ಅಂದಾಜು ಇಷ್ಟೇ ವೆಚ್ಚ ತಗಲುತ್ತದೆ.

ಈ ನೆಲೆಯಲ್ಲಿ ಸಂಪೂರ್ಣವಾದ ಸ್ವದೇಶಿಕರಣ ಜಾರಿ ಮಾಡಿದರೆ ಮುಚ್ಚದೆ ಅನ್ಯ ಮಾರ್ಗವಿಲ್ಲ ಎಂದು ಸಣ್ಣಮಟ್ಟದ ಸಂಸ್ಥೆಗಳ ಮುಖ್ಯಸ್ಥರು ಹೇಳುತ್ತಾರೆ.

ಉನ್ನತ ತಸ್ತಿಗೆಯಲ್ಲಿ ಸಂಪೂರ್ಣ ಸ್ವದೇಶೀಕರಣವನ್ನು ಕಾರ್ಯಗತ ಮಾಡಬೇಕು ಎನ್ನುವುದು ಕಡ್ಡಾಯ. ಉನ್ನತ ದರ್ಜೆಯ ಸ್ವದೇಶಿಗಳು ಕೆಲಸವಿಲ್ಲದಿದ್ದಾಗ ಖಾಸಗಿ ಕಂಪನಿಗಳ ಉನ್ನತ ಸ್ಥಾನಗಳಲ್ಲಿ ವಿದೇಶಿಯರು ಕೆಲಸ ಮಾಡುವುದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂಬುವುದನ್ನು ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಪ್ರಸ್ತುತ ಈ ಕ್ಷೇತ್ರದಲ್ಲಿ 20% ರಷ್ಟು ವಿದೇಶಿಯರು ಇದ್ದಾರೆ. ಆದರೆ ಅರ್ಹತೆಯ ಅನುಸಾರ ಸ್ವದೇಶಿಗಳಿಗೆ ದೊಡ್ಡ ವೇತನವನ್ನು ನೀಡಬೇಕಾದ ಕಾರಣದಿಂದಾಗಿ ಸಣ್ಣಮಟ್ಟದ ಸಂಶ್ಥೆಗಳು ಮುಂದುವರಿಯುವುದು ಸಾಧ್ಯವಿಲ್ಲ ಎಂದು ಈ ಕ್ಷೇತ್ರದಲ್ಲಿ ಕಾರ್ಯಾಚರಿಸುವವರು ಹೇಳುತ್ತಾರೆ.

error: Content is protected !! Not allowed copy content from janadhvani.com