ಕೆ ಸಿ ಎಫ್ ಬಹರೈನ್ ಜೀಲಾನಿ ಅನುಸ್ಮರಣೆ ಹಾಗೂ ದ್ಸಿಕ್ರ್ ಮಜ್ಲಿಸ್

ಕರ್ನಾಟಕ ಕಲ್ಚರಲ್ ಫೌಂಡೇಷನ್ ಬಹರೈನ್ , ಶಿಕ್ಷಣ ವಿಭಾಗ ಆಯೋಜಿಸಿದ ಜೀಲಾನಿ ಅನುಸ್ಮರಣೆ ಹಾಗೂ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಇಕ್ಬಾಲ್ ಮಂಜನಾಡಿರವರ ಪ್ಲಾಟ್ ,ನೋರ್ತ್ ಸೆಹ್ಲಾದಲ್ಲಿ ಬಹು| ಹೈದರ್ ಸಅದಿ ಹಾಗೂ ಬಹು| ಅಬೂಬಕ್ಕರ್ ಸಿದ್ದಿಕ್ ಉಸ್ತಾದ್ ರವರ ನೇತೃತ್ವ ದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಸ್ವಾಗತ ಭಾಷಣ ವನ್ನು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರೀಸ್ ಸಂಪ್ಯ ರವರು ನೇರವೇರಿಸದರು.
ಮುಖ್ಯ ಭಾಷಣದಲ್ಲಿ ಕೆ.ಸಿ.ಎಫ್. ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಎಕ್ಸಿಕ್ಯೂಟಿವ್ ಆಗಿರುವ ಅಬೂಬಕ್ಕರ್ ಮದನಿ ಉಸ್ತಾದ್ ರವರು ಶೈಖ್ ಜೀಲಾನಿ ರವರ ಜೀವನ ಚರಿತ್ರೆ ಯ ಕುರಿತು ವಿವರಿಸಿದರು.


ಕಾರ್ಯಕ್ರಮದಲ್ಲಿ ಕೆಸಿಎಫ್ ಬಹರೈನ್ ಐಎನ್ಸಿ ನೇತಾರರಾದ ಜಮಾಲ್ ವಿಠ್ಠಲ್ , ಅಲಿ ಮುಸ್ಲಿಯಾರ್ , ಫಕ್ರುದ್ದೀನ್ ಹಾಜಿ , ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಕ್ ಎಸ್ ,ಎಂ ,ಝೋನಲ್, ಸೆಕ್ಟರುಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.
ಬಹು|ಹೈದರ್ ಸಅದಿ ಉಸ್ತಾದ್ ರವರ ದುಃಅದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಕೊನೆಯಲ್ಲಿ ಶಿಕ್ಷಣ ವಿಭಾಗ ಚೇರ್ಮ್ಯಾನ್ ಕಲಂದರ್ ಶರೀಫ್ ಕಕ್ಯಪದವು ಧನ್ಯವಾದವಿತ್ತರು .

Leave a Reply

Your email address will not be published. Required fields are marked *

error: Content is protected !!