ಜಿದ್ದಾ: ಮೊಬೈಲ್ ಶಾಪ್, ಜುವೆಲ್ಲರಿ ನಂತರ ಹೊಸ ಕಾರ್ಮಿಕ ವಲಯದಲ್ಲೂ ಸ್ವದೇಶೀಕರಣದ ಛಾಯೆ ಮೂಡಿದೆ. ಅಲ್ಲಿನ ದೇಶೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಉಂಟು ಮಾಡುವ ತರಾತುರಿಯಲ್ಲಿ ಸರಕಾರ ಕಾರ್ಯನಿರತವಾಗಿದೆ. ಮುಂದಿನ ಹೆಜ್ಜೆಯಾಗಿ ಬಾಡಿಗೆಗೆ ವಾಹನಗಳನ್ನು ನೀಡುವ ಸ್ಥಾಪನೆಗಳತ್ತ ಅದು ಕಣ್ಣು ಹಾಯಿಸಿದೆ.
ರೆಂಟಲ್ ಕಾರ್ ವಲಯಗಳಲ್ಲಿ ಜೂನ್ ಹದಿನೆಂಟರ ನಂತರ ವಿದೇಶೀಯರು ಇರಬಾರದು ಎನ್ನುವ ಎಚ್ಚರಿಕೆಯನ್ನು ಅಧಿಕೃತರು ನೀಡಿದ್ದಾರೆ. ಕಾರ್ಮಿಕ, ಸಾಮಾಜಿಕ ಸಚಿವಾಲಯದ ವಕ್ತಾರ ಖಾಲಿದ್ ಅಬಲ್ಖೈಲ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಲಭಿಸಲಿದೆ.
ನಿತಾಖಾತ್ ಸಮೇತ ಹಲವಾರು ಯೋಜನೆಗಳ ಮೂಲಕ ಮೂಲ ನಿವಾಸಿಗಳಾದ ಯುವಕ/ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಉಂಟು ಮಾಡುವ ಸನ್ನಾಹದಲ್ಲಿ ಆಡಳಿತದ ವರ್ಗ ಮಗ್ನವಾಗಿದೆ. ಸಂಪೂರ್ಣ ಸ್ವದೇಶೀಕರಣದ ವಿಜಯಕ್ಕಾಗಿ ವಿವಿಧ ಪರಿಶೀಲನಾ ಪ್ಯಾಕೇಜ್ ಗಳನ್ನು ಸೌದಿ ಅರೇಬಿಯಾ ಸರಕಾರ ಜಾರಿಗೆ ತರುತ್ತಾ ಇದೆ.